ಬಾಲಿವುಡ್‌ ಡ್ರಾಮಾ ಕ್ವೀನ್‌ನಿಂದ ಹೊಸ ಬಾಂಬ್‌.. ಆದ್ರೆ ಇದು ನೋವಿನ ಬಾಂಬ್‌..!

ಬಾಲಿವುಡ್‌ನ ಡ್ರಾಮಾ ಕ್ವೀನ್‌ ಅಂತಾನೇ ಫೇಮಸ್‌ ಆಗಿರೋ ರಾಖಿ ಸಾವಂತ್‌ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿ ಇರ್ತಾರೆ, ಅದೇ ರೀತಿ ಈಗ ಹೊಸದೊಂದು ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ರಾಖಿ, ವಾಹಿನಿಯೊಂದಕ್ಕೆ ಇಂಟರ್‌ವ್ಯೂವ್‌ ನೀಡುವ ವೇಳೆ ಹೊಸದೊಂದು ಬಾಂಬ್‌ ಸಿಡಿಸಿದ್ದಾರೆ.

ಅನೇಕ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ನನಗೆ ಫೋನ್‌ ಮಾಡುತ್ತಿದ್ದರು ಅದು ಕೆಟ್ಟ ಉದ್ದೇಶದಿಂದಾಗಿತ್ತು, ನಾನು ಚಿತ್ರರಂಗಕ್ಕೆ ಬಂದ ಮೇಲೆ ಎಲ್ಲವನ್ನು ಸಹಿಸಿಕೊಂಡೆ, ಆದ್ರೆ ನಾನು ಆಡಿಶನ್‌ಗೆ ಹೋಗುವ ವೇಳೆ ನಿರ್ದೇಶಕರು ಹಾಗೂ ನಿರ್ಮಾಕರು ನಿನ್ನ ಟ್ಯಾಲೆಂಟ್‌ ತೋರಿಸು ಅನ್ನುತ್ತಿದ್ದರು, ಆದ್ರೆ ಅವರು ಯಾವ ಟ್ಯಾಲೆಂಟ್‌ ಬಗ್ಗೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿರಲಿಲ್ಲ. ನಾನು ಆಡಿಶನ್‌ಗೆ ಫೋಟೋ ತೆಗೆದುಕೊಂಡು ಹೋಗುತ್ತಿದ್ದೆ, ಅವರು ನನಗೆ ರೂಮಿಗೆ ಕರೆದು ಬಾಗಿಲು ಹಾಕಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಇನ್ನು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿರೋ ರಾಖಿ ಸಾವಂತ್‌, ನಾನು ಕಷ್ಟ ಪಟ್ಟು ಮೇಲೆ ಬಂದವಳು, ನನ್ನ ತಾಯಿ ಆಸ್ಪತ್ರೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು, ಆಗ ನಮ್ಮ ಬಳಿ ಊಟ ಬಟ್ಟೆ ಹಣವಿರಲಿಲ್ಲ, ನಾನು ಹಾಗೂ ನನ್ನ ತಾಯಿ ಊಟಕ್ಕಾಗಿ ಅನೇಕ ಕಷ್ಟಗಳನ್ನು ಎದುರಿಸಿದ್ದೇವೆ ಎಂದು ರಾಖಿ ಸಾವಂತ್‌ ತಮ್ಮ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top