ಬಾಂಗ್ಲಾ ದೇಶಕ್ಕೆ ಕೊರೋನಾ ಎಫೆಕ್ಟ್‌..ಸ್ಪಾನ್ಸರ್‌ ಇಲ್ಲದೇ ಪರದಾಟ..

ಕ್ರಿಕೆಟ್‌ ದುನಿಯಾದಲ್ಲಿ ಪವರ್‌ ಫುಲ್‌ ಟೀಂ ಆಗಲು ಹೊರಟಿರೋ ಬಾಂಗ್ಲಾ ದೇಶದ ಕ್ರಿಕೆಟ್‌ ತಂಡಕ್ಕೆ ಇದೀಗ ಸ್ಪಾನ್ಸರ್‌ ಶಿಪ್‌ ಇಲ್ಲದೇ ಪರದಾಡುವ ಸ್ಥಿತಿಗೆ ಬಂದಿದೆ. ʻನಮ್ಮ ತಂಡಕ್ಕೆ ಯಾವುದೇ ಸ್ಪಾನ್ಸರ್‌ ಇಲ್ಲ ಎಂದು ಬಾಂಗ್ಲಾ ಕ್ರಿಕೆಟ್‌ ಬೋರ್ಡ್‌ ಹೇಳಿಕೊಂಡಿದೆ. ಕೊರೊನಾ ಹೊಡೆತಕ್ಕೆ ಇದೀಗ ಬಾಂಗ್ಲಾ ದೇಶ ಕ್ರಿಕೆಟ್‌ ಬೋರ್ಡ್‌ ಕೂಡ ತತ್ತರಿಸಿದ್ದು , ನಮ್ಮ ತಂಡಕ್ಕೆ ಪ್ರಾಯೋಜಕತ್ವ ನೀಡಲು ಯಾರು ಬಂದಿಲ್ಲ ಎಂದು ಬಿಸಿಬಿ ಹೇಳಿಕೊಂಡಿದೆ. ಇನ್ನು ಈ ತಿಂಗಳಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಶ್ರೀಲಂಕಾ ಪ್ರವಾಸ ಹೊರಟಿರೋ ಬಾಂಗ್ಲಾ ತಂಡಕ್ಕೆ ಸದ್ಯ ತಾತ್ಕಾಲಿಕ ಸ್ಪಾನ್ಸರ್‌ ಹುಡುಕಾಟಕ್ಕೆ ಬಿಸಿಬಿ ಮುಂದಾಗಿದೆ. ಇನ್ನು ಇದರ ಜೊತೆಯಲ್ಲಿ ಬಾಂಗ್ಲಾ ಕ್ರಿಕೆಟ್‌ ಬೋರ್ಡ್‌ ಟೂರ್ನಿಯ ರೈಟ್ಸ್‌ ಅನ್ನುಕೂಡ ಇನ್ನು ಫೈನಲ್‌ ಮಾಡಲು ಸಾಧ್ಯವಾಗಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top