ಬಳ್ಳಾರಿಯಲ್ಲಿ ರಾಕಿಭಾಯ್ ಹವಾ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಹವಾ ಜೋರಾಗಿದೆ. ಕಳೆದ ವರ್ಷ ಕೆಜಿಎಫ್ ಚಾಪ್ಟರ್ 1 ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಅಬ್ಬರಿಸಿದ್ದೇ ತಡ.. ರಾಕಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ರು. ಅಷ್ಟೇ ಅಲ್ಲ ಈ ಸಿನಿಮಾ ಮೂಲಕ ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ತಮ್ಮ ಎರಡನೇ ಸಿನಿಮಾದಲ್ಲೇ ರಾಷ್ಟ್ರಮಟ್ಟದಲ್ಲಿ ಪಾಪ್ಯುಲರ್ ಆದ್ರು. ಅಲ್ಲದೆ ಸ್ಯಾಂಡಲ್​​ ವುಡ್ ಬ್ರಾಂಡ್​ ವ್ಯಾಲ್ಯು ಕೂಡ ಈ ಸಿನಿಮಾದಿಂದ ಹೆಚ್ಚಿತು. ಇಂಥಾ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಬಂಡವಾಳ ಹಾಕಿದ ವಿಜಯ್ ಕಿರಂಗದೂರ್ ಶ್ರಮ ಕೂಡ ಶ್ಲಾಘನೀಯ.


ಇದೀಗ ಕೆಜಿಎಫ್ ಚಾಪ್ಟರ್ 2 ಸೆಟ್ಟೇರಿದೆ. ರಾಕಿಭಾಯ್ ಫಸ್ಟ್ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೂಟಿಂಗಾಗಿ ಬಳ್ಳಾರಿಗೆ ತೆರಳಿರುವ ರಾಕಿಭಾಯ್ ಜಿಂದಾಲ್​ ಏರ್​ಪೋರ್ಟ್​ಗೆ ಬಂದಿಳಿದ ಕ್ಷಣದ ಫೋಟೋಗಳು ಈಗ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ರಾಕಿಭಾಯ್ ಜೊತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ರಾಕಿಭಾಯ್ ಖದರ್ ಸೂಪರ್ ಗುರೂ.. !

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top