ಬಲವಂತವಾಗಿ ಎಣ್ಣೆ ಹೊಡೆಯಲು ಪತಿಯ ಹಿಂಸೆ ಪತ್ನಿ‌ ಮಾಡಿದ್ದೇನು ಗೊತ್ತಾ..?

ಬಲವಂತವಾಗಿ ಪತ್ನಿಗೆ ಮದ್ಯಪಾನ ಮಾಡುವಂತೆ ಪೀಡಿಸುತ್ತಿದ್ದ ಪತಿಯ ವಿರುದ್ಧ ಬೇಸತ್ತ ಪತ್ನಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾಳೆ.ಇನ್ನು ಈ ಘಟನೆ ನಡೆದಿರೋದು ಚಿಕ್ಕಮಾವಳ್ಳಿಯಲ್ಲಿ 27ವರ್ಷದ ಮಹಿಳೆ ರವೀಂದ್ರನಾಥ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರುನೀಡಿದ್ದಾಳೆ. ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗಳು ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಶುರುವಾಗಿದೆ.ಇ‌ನ್ನು ಗಂಡ ಪ್ರತಿದಿನ ಮನೆಗೆ ಮದ್ಯತಂದು ಮದ್ಯಪಾನ ಮಾಡುವಂತೆ ಹಿಂಸೆ ನೀಡುತ್ತಿದ್ದ,ಜೊತೆಗೆ ಪಬ್ ಗೆ ಕರೆದುಕೊಂಡು ಹೋಗಿ ಎಣ್ಣೆ ಹೊಡೆಯಂತೆ ಹಿಂಸೆ ನೀಡುತ್ತಿದ್ದ.ವಿರೋಧಿಸಿದ್ರೆ ಚಿತ್ರಹಿಂಸೆ ನೀಡುತ್ತಿದ್ದ.ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ವಿವಿಧ ಭಂಗಿಯಲ್ಲಿ ಫೋಟೋ ತೆಗೆಯುತ್ತಿದ್ದ.ಮನೆಯಿಂದ‌ ವರದಕ್ಷಿಣೆ ತರದಿದ್ದರೆ ಫೋಟೋಗಳನ್ನು ಪಬ್ಲಿಕ್ ಮಾಡೋದಾಗಿ ಹೇಳುತ್ತಿದ್ದ.ಕೆಲಸಕ್ಕೆ ಹೋಗಿ‌ ಮನೆಯ ಖರ್ಚುವೆಚ್ಚ ನೋಡಿಕೋ ಎಂದು ಹೆದರಿಸುತ್ತಿದ್ದ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top