ಬರ್ತ್ ಡೇಗೆ ಲವರ್ ವಿಶ್ ಮಾಡಿಲ್ಲ ಎಂದು ಸತ್ತ ಪ್ರೇಮಿ..!

ತನ್ನ ಹುಟ್ಟುಹಬ್ಬಕ್ಕೆ ತನ್ನ ಪ್ರೇಯಸಿ ವಿಶ್ ಮಾಡಲಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದ ಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.ಶಿವಕುಮಾರ್ ಎಂ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು,ಕಾರು ಚಾಲಕನಾಗಿದ್ದ ಶಿವಕುಮಾರ್ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು,ಆ ಯುವತಿ ಕೆಲವು ದಿನಗಳಿಂದ ಯುವತಿ ಶಿವಕುಮಾರ್ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಫೆ.26ರಂದು ಶಿವಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ,ತನ್ನ ಪ್ರೇಯಸಿ ಹುಟ್ಟುಹಬ್ಬಕ್ಕೆ ಕರೆಮಾಡಿ ವಿಶ್ ಮಾಡುತ್ತಾಳೆ ಎಂದು ನಂಬಿದ್ದಳು,ಆದ್ರೆ ಯುವತಿ ಕರೆ ಮಾಡಿ ವಿಶ್ ಮಾಡಿಲ್ಲ ಎಂದು ನೊಂದ ಶಿವಕುಮಾರ್ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾ‌ನೆ.

ಜೊತೆಗೆ ಡೆತ್ ನೋಟ್ ಬರೆದಿದ್ದು,ನನ್ನ ಸಾವಿಗೆ ಯಾರು ಕಾರಣರಲ್ಲ,ಆ ಯುವತಿಯು ಕಾರಣವಲ್ಲ ಆಕೆಗೆ ಏನು ಮಾಡಬೇಡಿ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ.ಸದ್ಯ ನಂದಿಗಿರಿಧಾಮ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top