ಬರೋಬ್ಬರಿ 4ಲಕ್ಷಕ್ಕೆ ಸೇಲ್‌ ಆಯ್ತು ನಾಲ್ಕು ಎಲೆಯ ಗಿಡ..!

ಪ್ರಪಂಚದಲ್ಲಿ ಪ್ರತಿ ದಿನ ಹೊಸ ಹೊಸ ಸುದ್ದಿಗಳು ಬರ್ತಾನೆ ಇರ್ತಾವೆ, ಅದರಲ್ಲಿ ಕೆಲವೊಂದು ಸಾಮಾನ್ಯ ಅನಿಸಿದ್ರೆ ಇನ್ನು ಕೆಲವು ವಿಷಯಗಳು ಅಚ್ಚರಿಯನ್ನು ಮೂಡಿಸುತ್ತವೆ. ಅದೇ ರೀತಿ ಈ ಸುದ್ದಿ ಕೂಡ, ಇಲ್ಲೊಬ್ಬ ವ್ಯಕ್ತಿ 4 ಲಕ್ಷ ರೂಪಾಯಿಯನ್ನು ಕೊಟ್ಟು ನಾಲ್ಕು ಎಲೆ ಇರೋ ಅಪರೂಪದ ಒಂದು ಗಿಡವನ್ನು ಹರಾಜಿನಲ್ಲಿ ಖರೀದಿಸಿದ್ದಾನೆ. ಈ ಗಿಡವನ್ನು ವೇರಿಗೇಟೆಡ್‌ ಮಿನಿಯಾ ಅಂತ ಕರೆಯುತ್ತಾರೆ. ಟ್ರೀಟ್‌ ಮೀ ಅನ್ನೋ ವೆಬ್‌ ಸೈಟ್‌ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 8,150 ನ್ಯೂಜಿಲ್ಯಾಂಡ್‌ ಡಾಲರ್‌ಗೆ ಈ ಗಿಡ ಮಾರಾಟವಾಗಿದೆ. ಈ ವಿಶಿಷ್ಟ ಗಿಡಗಳನ್ನು ಕೊಳ್ಳಲು 62 ಬಿಡ್‌ಗಳು ಬಂದಿದ್ವು ಅಂತ ತಿಳಿದುಬಂದಿದ್ದು, ಅದರಲ್ಲಿ 4 ಲಕ್ಷ ರೂಪಾಯಿಗೆ ಈ ಗಿಡ ಬಿಡ್‌ ಆಗಿದೆ.

ಇನ್ನು ಇದನ್ನು ಖರೀದಿ ಮಾಡಿರೋ ವ್ಯಕ್ತಿ ತೋಟವೊಂದನ್ನು ಮಾಡಿ ಅದರ ಮಧ್ಯೆ ಒಂದು ರೆಸ್ಟೋರೆಂಟ್‌ ಮಾಡೋ ಪ್ಲಾನ್‌ನಲ್ಲಿ ಇದ್ದಾರೆ ಹಾಗಾಗಿ ಈ ಅಪರೂಪದ ಗಿಡವನ್ನು ಖರೀದಿ ಮಾಡಿದ್ದಾರೆ ಎಂದು ಪತ್ರಿಕೆಯಲ್ಲಿ ತಿಳಿದುಬಂದಿದೆ. ಇನ್ನು ಈ ಗಿಡದ ವಿಚಾರವಾಗಿ 1600ಕ್ಕೂ ಹೆಚ್ಚು ಸರ್ಚ್‌ಗಳು ಬಂದಿದ್ದವು ಅಂತ ಟ್ರೇಡ್‌ ಮೀ ವಕ್ತಾರೆ ರೂಬಿ ಟಾಪ್‌ ಝ್ಯೂಂಡ್‌ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top