ಬರೋಬ್ಬರಿ 128ಕೋಟಿ 45ಲಕ್ಷದ 95ಸಾವಿರದ ನೂರ ನಲವತ್ತನಾಲ್ಕು ರೂಪಾಯಿಗಳು!

kannada news live latest news

ಒಂದು ಮಧ್ಯಮ ವರ್ಗದ ಮನೆಗೆ ಅಬ್ಬಬ್ಬಾ ಅಂದ್ರೆ ಕರೆಂಟ್ ಬಿಲ್ ಎಷ್ಟು ಬರಬಹುದು, ಐದುನೂರೋ, ಸಾವಿರ ರೂಪಾಯಿಯೋ ತಿಂಗಳಿಗೆ ಬರಬಹುದು, ಆದ್ರೆ ಇಲ್ಲೊಂದು ಮನೆಗೆ ಬಂದಿರೋ ಕರೆಂಟ್ ಬಿಲ್ ಕೇಳಿದ್ರೆ ನೀವೇ ಒಮ್ಮೆಲೇ ಶಾಕ್ ಆಗಿ ಹೋಗ್ತೀರಾ, ಹೌದು ಆ ಮನೆಗೆ ಬಂದಿರೋದು ಒಂದಲ್ಲ, ಎರಡಲ್ಲ, ಬರೋಬ್ಬರಿ 128ಕೋಟಿ 45ಲಕ್ಷದ 95ಸಾವಿರದ ನೂರ ನಲವತ್ತನಾಲ್ಕು ರೂಪಾಯಿಗಳು,
ಹೌದು ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಚಾಮ್ರಿ ನಿವಾಸಿ ಶಮೀಮ್ ಎಂಬೋರ ಮನೆಗೆ ಈ ಕರೆಂಟ್ ಬಿಲ್ ಬಂದಿದೆ. ಬಿಲ್ ನೋಡಿ ಶಮೀಮ್ ಫ್ಯಾಮಿಲಿಗೆ ಕರೆಂಟ್ ಹೊಡ್ದಂಗಾಗಿದೆ. ಯಾಕಂದ್ರೆ ಇವ್ರು ಮನೆಯಲ್ಲಿ ಯೂಸ್ ಮಾಡ್ತಿರೋದು ಬಲ್ಬ್, ಮತ್ತೆ ಫ್ಯಾನ್ ಅಷ್ಟೇ. ಹೀಗಾಗಿ ಈ ಕರೆಂಟ್ ಬಿಲ್ ಬಡ ಕುಟುಂಬವನ್ನ ದಂಗು ಬಡಿಸಿದೆ.

ನಾವು ಬಡವರು, ನಮ್ಮ ಮನೆಯಲ್ಲಿ ಬಳಕೆ ಮಾಡುವುದು ಬಲ್ಬ್ ಮತ್ತು ಫ್ಯಾನ್ ಮಾತ್ರ. ಅಷ್ಟಕ್ಕೇ ಇಷ್ಟು ಬಿಲ್ ಹೇಗೆ ಬರುತ್ತದೆ.? ನಮಗೆ ಇಷ್ಟೊಂದು ಪ್ರಮಾಣದ ಬಿಲ್ ಕಟ್ಟಲು ಸಾಧ್ಯವಿಲ್ಲ. ನಮ್ಮ ಅಳಲನ್ನು ಯಾರೂ ಕೇಳುತ್ತಿಲ್ಲ. ನಾವು ಹಣ ಪಾವತಿ ಮಾಡದೇ ನಮಗೆ ಮತ್ತೆ ವಿದ್ಯುತ್ ಸಂಪರ್ಕ ಮಾಡೋದಿಲ್ಲ ಅಂತಿದ್ದಾರೆ ಅಂತ ಶಮೀಮ್ ತಮ್ಮ ಅಳಲನ್ನ ಹೇಳಿಕೊಂಡಿದ್ದಾರೆ.


ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಲೆಕ್ಟ್ರಿಕಲ್ ಎಂಜಿನಿಯರ್ ಇದು ತಾಂತ್ರಿಕ ದೋಷದಿಂದ ಆಗಿರುವ ಪ್ರಮಾದ. ಅವರು ನಮಗೆ ಬಿಲ್ ಪ್ರತಿಯನ್ನು ತಂದು ಕೊಟ್ಟರೆ ನಾವು ಸರಿಪಡಿಸುತ್ತೇವೆ ಎಂದಿರುವ ಎಂಜಿನಿಯರ್, ಇಡೀ ಜಿಲ್ಲೆಯ ಕರೆಂಟ್ ಬಿಲ್ ಮಿಸ್ ಆಗಿ ಶಮೀಮ್ ಮನೆಗೆ ಬಂದಿದೆಯಂತೆ. ಏನೇ ಆಗ್ಲಿ ಈ ತಪ್ಪನ್ನ ಸರಿಪಡಿಸಿ ಬಡ ಕುಟುಂಬಕ್ಕೆ ವಿದ್ಯುತ್ ನೀಡಬೇಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top