ಬನ್ನೇರುಘಟ್ಟ ಆನೆ ಮರಿಗೆ ʻಸುಧಾʼ ಮೂರ್ತಿಯವರ ಹೆಸರು..

ಬನ್ನೇರುಘಟ್ಟ ಉದ್ಯಾನವನದ ಆನೆ ಮರಿಯೊಂದಕ್ಕೆ ಸುಧಾ ಮೂರ್ತಿ ಅವರ ಹೆಸರು ಇಡುವ ಮೂಲಕ ಸುಧಾಮೂರ್ತಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಇತ್ತಿಚೆಗೆ ಉದ್ಯಾನವನದ ೪೫ವರ್ಷದ ಸುವರ್ಣ ಅನ್ನೋ ಆನೆ ಆಗಸ್ಟ್‌ ೧೭ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಇದೇ ವೇಳೆ ಉದ್ಯಾನವನದ ಅಧಿಕಾರಿಗಳು ಆನೆ ಮರಿಗೆ ಏನು ಹೆಸರಿಡಬೇಕು ಎಂದು ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಹೆಸರು ಸೂಚಿಸಲು ಮನವಿ ಮಾಡಿಕೊಂಡಿದ್ದರು.

ಈ ವೇಳೆ ಅನೇಕರು ಸುಧಾಮೂರ್ತಿ ಅವರ ಹೆಸರನ್ನು ಸೂಚಿಸಿದ್ರು, ಇನ್ನು ಆಗಸ್ಟ್‌ ೧೯ರಂದು ಸುಧಾಮೂರ್ತಿ ಅವರು ೭೦ನೇ ವಸಂತಕ್ಕೆ ಕಾಲಿಟ್ಟಿದ್ದರು, ಈ ಕುರಿತು ಉದ್ಯಾನವನದ ನಿರ್ದೇಶಕಿ ವನಶ್ರೀ ಬಿಪಿನ್‌ ಸಿಂಗ್‌ ಅವರು ಆನೆ ಮರಿಗೆ ʻಸುಧಾʼ ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ. ಇನ್ನು ಸುಧಾಮೂರ್ತಿ ಅವರು ಅನೇಕ ಬಾರಿ ಉದ್ಯಾನವನಕ್ಕೆ ಭೇಟಿ ನೀಡಿ ಇಲ್ಲಿ ಕಾರ್ಯವೈಕರಿಗಳ ಬಗ್ಗೆ ಮಾಹಿತಿ ಪಡೆದಿದ್ದರು.

ಅಲ್ಲದೇ ಗದಗ ಬಳಿ ಬನ್ನೇರುಘಟ್ಟ ಉದ್ಯಾನವನದ ಮಿನಿ ಮೃಗಾಲಯದ ಅಭಿವೃದ್ಧಿಗೆ ಸುಧಾ ಮೂರ್ತಿ ಸಹಾಯ ಹಸ್ತ ಕೂಡ ಚಾಚಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top