ಬಡವರಿಗಾಗಿ 1₹ ಗೆ ಇಡ್ಲಿ ಕೊಡೋ 80ರ ಅಜ್ಜಿ ಎಲ್ಲಿ ಗೊತ್ತಾ..?

ಬಡವರಿಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅದೆಷ್ಟೋ ಸ್ಕೀಂಗಳನ್ನು ತಂದು ಅನುಕೂಲವನ್ನು ಮಾಡಿಕೊಡ್ತಾ ಇದ್ರು ಅದ್ಯಾವುದ ಸರಿಯಾದ ರೀತಿ ಬಡವರ ಕೈ ಸೇರುತ್ತಿಲ್ಲ, ಇನ್ನು ಬಡವರಿಗೆ ಅನುಕೂಲವಾಗಲಿ ಅಂತ ತೆರೆದ ಇಂದಿರಾ ಕ್ಯಾಂಟೀನ್ 10 ರೂಪಾಯಿಗೆ ಊಟ ನೀಡುತ್ತಿದೆ ಆದ್ರೂ ನಷ್ಟವಾಗುತ್ತಿದೆ ಅನ್ನೋ ನೆಪವೊಡ್ಡಿ ಮುಚ್ಚೋ ಪರಿಸ್ಥತಿ ಬಂದಿದೆ, ಆದ್ರೆ ಇಲ್ಲೊಬ್ಬ 80ರ ವೃದ್ಧ ಮಹಿಳೆ ಮೂವತ್ತು ವರ್ಷಗಳಿಂದ ಬಡವರಿಗಾಗಿಯೇ ಒಂದು ರೂಪಾಯಿಗೆ ಇಡ್ಲಿ ಮಾರುತ್ತಿದ್ದು ಈಕೆ ನಿಜವಾಗಿಯೂ ಬಡವರ ಬಂಧು ಎನಿಸಿಕೊಂಡಿದ್ದಾರೆ.

ಹೌದು ಚೆನ್ನೈ ಮೂಲಕ ವಾಡಿವೇಳನ್ ಪಾಲ್ಯಂ ಗ್ರಾಮದಲ್ಲಿರುವ ಈ 80 ವರ್ಷದ ಅಜ್ಜಿ ಮೂವತ್ತು ವರ್ಷಗಳಿಂದ 1 ರೂಪಾಯಿಗೆ ಇಡ್ಲಿ, ಚಟ್ನಿ ಮತ್ತು ಸಾಂಬಾರ್ ಅನ್ನು ನೀಡುತ್ತಿದ್ದಾರೆ. ಇನ್ನು ಆಶ್ವರ್ಯದ ಸಂಗತಿ ಏನೆಂದರೆ ಇತ್ತಿಚೆಗೆ ಇಡ್ಲಿ ಬೆಲೆಯನ್ನು ಒಂದು ರೂಪಾಯಿಗೆ ಏರಿಸಿದ್ದು ಈ ಹಿಂದೆ ಒಂದು ಇಡ್ಲಿಯ ಬೆಲೆ ಕೇವಲ ಐವತ್ತು ಪೈಸೆ ಮಾತ್ರ ಇತ್ತು. ಈ ವಿಷಯವನ್ನು ಕೇಳಿದ್ರೆ ಅಜ್ಜಿ ಹೇಳೋದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರೋದ್ರಿಂದ 50 ಪೈಸೆ ಬೆಲೆ ಜಾಸ್ತಿ ಮಾಡಿದ್ದೀವಿ ಅಂತ, ಇನ್ನು ಪ್ರತಿದಿನ ಇಡ್ಲಿ ತಯಾರಿಸಲು ತಾವೇ ಕೈಯಾರ 4ಗಂಟೆಗಳ ಕಾಲ ಹಿಟ್ಟನ್ನು ರುಬ್ಬುವ ಅಜ್ಜಿ ಸಾವಿರಾರು ಇಡ್ಲಿಯನ್ನು ಮಾರಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ, ಇನ್ನು ಇವರಿಗೆ ಇಷ್ಟು ಫೇಮಸ್ ಇರೋ ಇಡ್ಲಿಯನ್ನು 20-30 ರೂಪಾಯಿಗೆ ಮಾರಬಹುದಲ್ಲ ಅಂತ ಕೇಳಿದ್ರೆ, ನನ್ನ ಇಡ್ಲಿ ಬೆಲೆಯನ್ನು ಏರಿಸಿ ಬಿಟ್ಟರೆ ಪಾಪ ಬಡವರು ಎಲ್ಲಿ ಹೋಗಬೇಕು ಏನು ಮಾಡಬೇಕು. ನಾನು ದುಡ್ಡಿಗಾಗಿ ಈ ವೃತ್ತಿಯನ್ನು ಮಾಡುತ್ತಿಲ್ಲ ಬಡವರ ಹಸಿವು ನೀಗಿಸಲು ಈ ವೃತ್ತಿ ಮಾಡುತ್ತಿರುವೆ ಎನ್ನುತ್ತಾರೆ ಈ ಅಜ್ಜಿ. ಒಟ್ಟಿನಲ್ಲಿ ಈ ಇಳಿ ವಯಸ್ಸಿನಲ್ಲಿ ತಮ್ಮ ಆರೈಕೆಗೆ ಬೇರೆಯವರ ಕೈ ಕಾಯುವ ಈ ವಯಸ್ಸಿನಲ್ಲಿ ಯಾರ ಆಶ್ರಯವೂ ಇಲ್ಲದೇ ಸಾವಿರಾರು ಬಡವರ ಹಸಿವನ್ನು ನೀಗಿಸುತ್ತಿರೋ ಈ ಅಜ್ಜಿ ನಮ್ಮೆಲ್ಲರ ರಿಯಲ್ ಹೀರೋ ಅನ್ನೋದ್ರಲ್ಲಿ ಯಾವುದೇ ತಪ್ಪಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top