
ಎಸ್, ಸ್ಯಾಂಡಲ್ವುಡ್ನ ಬಿಗ್ ಬ್ಯಾನರ್ ಆದ ಹೊಂಬಾಳೆ ಫಿಲ್ಮ್ಸ್ ತನ್ನ 8 ನೇ ಸಿನಿಮಾ 17 ಡಿಸೆಂಬರ್ ರಂದು ಅನೌನ್ಸ್ ಮಾಡೋದಾಗಿ ಹೇಳಿತ್ತು, ಈಗಾಗಲೇ ಪ್ರಭಾಸ್ ಮತ್ತು ಪ್ರಶಾಂತ ನೀಲ್ ಕಾಂಬೀನೇಷನ್ನಲ್ಲಿ ʻಸಲಾರ್ʼ ಸಿನಿಮಾ ಅನೌನ್ಸ್ ಮಾಡಿ ಕುತೂಹಲ ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್ ಇಂದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹುಟ್ಟುಹಬ್ಬದಂದು ತನ್ನ ಬ್ಯಾನರ್ನ 8ನೇ ಸಿನಿಮಾವನ್ನು ಅನೌನ್ಸ್ ಮಾಡಿದೆ. ಸದ್ಯ ಮದಗಜ ಚಿತ್ರದ ಶೂಟಿಂಗ್ನಲ್ಲಿ ಬ್ಯೂಸಿಯಾಗಿರೋ ಶ್ರೀಮುರುಳಿ, ನಂತರ ಬಘೀರನಾಗಲಿದ್ದಾರೆ. ಹೌದು ವಿಜಯ್ ಕಿರಂಗದೂರು ಬಂಡವಾಳ ಹೂಡುತ್ತಿರೊ ಬಘೀರ ಚಿತ್ರದ ಮೂಲಕ ಶ್ರೀ ಮುರುಳಿ ಜೊತೆಗಿನ ನೆಕ್ಟ್ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಕೊಟ್ಟಿದ್ದು, ಆ ಮೂಲಕ ಮತ್ತೊಂದು ಬಿಗ್ಬಜೆಟ್ ಸಿನಿಮಾಗೆ ಸಾಕ್ಷಿಯಾಗುತ್ತಿದ್ದಾರೆ ಹೊಂಬಾಳೆ ಫಿಲ್ಮ್ಸ್, ಇನ್ನು ಬಘೀರ ಚಿತ್ರಕ್ಕೆ ಲಕ್ಕಿ ಸಿನಿಮಾ ಖ್ಯಾತಿಯ ಡಾ.ಸೂರಿ ಡೈರೆಕ್ಷನ್ ಹೇಳ್ತಾ ಇದ್ದಾರೆ, ಇನ್ನು ಈ ಚಿತ್ರದ ವಿಶೇಷತೆ ಅಂದ್ರೆ ಈ ಚಿತ್ರಕ್ಕೆ ಚಿತ್ರಕಥೆ ಬರೆದಿರೋದು ರೋರಿಂಗ್ ಸ್ಟಾರ್ಗೆ ಮರುಜೀವನ ನೀಡಿದ ಪ್ಯಾನ್ ಇಂಡಿಯಾ ಡೈರೆಕ್ಟರ್ ಪ್ರಶಾಂತ್ ನೀಲ್ ಕಥೆ ಬರೆಯುತ್ತಿರೋದು ವಿಶೇಷ, ಈಗಾಗಲೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು ಚಿತ್ರದಲ್ಲಿ ಶ್ರೀ ಮುರುಳಿ ಪೊಲೀಸ್ ಲುಕ್ನಲ್ಲಿ ರಗಡ್ ಆಗಿ ಕಾಣಿಸುತ್ತಿದ್ದಾರೆ.ಸಮಾಜದಲ್ಲಿ ನಡೆಯೋ ಅನ್ಯಾಯದ ವಿರುದ್ಧ ಹೋರಾಡೋ ಒಬ್ಬ ಸಿನ್ಸಿಯರ್ ಪೊಲೀಸ್ ಆಫಿಸರ್ ಆಗಿ ರೋರಿಂಗ್ ಮಾಡಲಿದ್ದಾರೆ ಶ್ರೀ ಮುರುಳಿ. ಹುಟ್ಟುಹಬ್ಬದ ದಿನ ಭರ್ಜರಿ ಸೌಂಡ್ ಮೂಲಕ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿ ತಮ್ಮ ಅಭಿಮಾನಿಗಳಿಗೆ ಸಂತೋಷ ನೀಡಿದ್ರೆ, ಇತ್ತ ಶ್ರೀ ಮುರುಳಿಗಾಗಿ ಪ್ರಶಾಂತ್ ನೀಲ್ ಉಗ್ರಂ ವೀರಂ ಸಿನಿಮಾ ಮಾಡಲಿದ್ದಾರೆ ಅಂತ ಕೂತೂಹಲದಲ್ಲಿ ಇದ್ದ ಸಿನಿ ರಸಿಕರಿ ಶ್ರೀ ಮುರುಳಿ ಸಿನಿಮಾಗಾಗಿ ಕಥೆ ಬರೆಯೋ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಥ್ರಿಲ್ ನೀಡಿದ್ದಾರೆ.
ಸದ್ಯ ಮದಗಜ ಚಿತ್ರದ ಶೂಟಿಂಗ್ನಲ್ಲಿ ಬ್ಯೂಸಿಯಾಗಿರೋ ಶ್ರೀ ಮುರುಳಿ, ಮದಗಜ ಚಿತ್ರದ ಶೂಟಿಂಗ ಮುಗಿದ ನಂತರ ಬಘೀರನಾಗಿ ಮತ್ತೆ ಘರ್ಜಿಸಲಿದ್ದಾರೆ.