ಫೆ.8ಕ್ಕೆ ಪ್ರೇಮ್ಸ್ ಕೊಡ್ತಿದ್ದಾರೆ ಮೂರು ಸಪ್ರೈಸ್..!

ಪ್ರೇಮ್ಸ್ ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಏಕ್ ಲವ್ ಯಾ..ಏಕ್ ಲವ್ ಯಾ ಈಗಾಗಲೇ ಸಣ್ಣ ಬಿಟ್‌ ಮ್ಯೂಸಿಕ್‌ನಿಂದ ಭಾರೀ ಕುತೂಹಲ‌ ಸೃಷ್ಟಿಸಿದೆ.ಇನ್ನು ಫ್ರೆಬ್ರವರಿ 8ರಂದು ಏಕ್ ಲವ್ ಯಾ ಚಿತ್ರತಂಡ ಸಿನಿರಸಿಕರಿಕೆ ಸಪ್ರೈಸ್ ನೀಡಲು ರೆಡಿಯಾಗಿದ್ದಾರೆ.3ಸಪ್ರೈಸ್ ಜೊತೆಯಲ್ಲಿ ಏಕ್ ಲವ್ ಯಾ ಚಿತ್ರದ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗ್ತಾ ಇದೆ.

A2 ಮ್ಯೂಸಿಕ್ ಯೂಟ್ಯೂಬ್ ಮೂಲಕ ಮೋಷನ್ ಪೋಸ್ಟರ್ ರಿಲೀಸ್ ಆಗ್ತಾ ಇದ್ದು ಈ ಮೂಲಕ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ನಾಯಕನಾಗಿ ಮೊದಲ ಬಾರಿ ನಟಿಸ್ತಾ ಇದ್ದಾರೆ.ಇನ್ನು ರಾಣಾ ಜೊತೆ ರಚಿತಾರಾಮ್ ಜೋಡಿಯಾಗಿದ್ದು ,ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಅನ್ನೋ‌ ಬೆಡಗಿಯನ್ನು ಪರಿಚಯ ಮಾಡ್ತಿದೆ.ಚಿತ್ರಕ್ಕೆ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡ್ತಾ ಇದ್ದು.ಚಿತ್ರದಲ್ಲಿ ಶಶಿಕುಮಾರ್ ,ಚರಣ್ ರಾಜ್ ,ಹಾಗೂ ಕಾಮಿಡಿ‌ಕಿಲಾಡಿ ಖ್ಯಾತಿಯ ಸೂರಜ್ ಮತ್ತು ಹಿತೇಶ್ ಅಭಿನಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top