ಫಸ್ಟ್‌ ನೈಟ್‌ನಲ್ಲಿ ಗಂಡನ ಬಳಿ ಅದೇ ಇಲ್ಲ ಎಂದು ಪತ್ನಿ ಏನ್‌ ಮಾಡಿದ್ಲು ಗೊತ್ತಾ..!?

ಮದುವೆಯಾದ ಪ್ರತಿಯೊಬ್ಬ ಹುಡುಗ ಹುಡುಗಿ ತನ್ನ ಮೊದಲ ರಾತ್ರಿ ಹಾಗಿರ ಬೇಕು, ಹೀಗಿರಬೇಕು ಅನ್ನೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ, ಆದ್ರೆ ಆ ಮೊದಲ ರಾತ್ರಿಯೇ ಸಂತೋಷ ಮಯವಾಗಿರಲಿಲ್ಲ ಅಂದ್ರೆ ಯಾವುದೇ ಹುಡುಗನಾಗಲಿ, ಹುಡುಗಿಯಾಗಲಿ ಸಂಸಾರವನ್ನು ಜೀವನ ಪೂರ್ತಿ ನಡೆಸಲು ಸಾಧ್ಯವಿಲ್ಲ ಅಂತ ಹೇಳ್ತಾರೆ. ಆದ್ರೆ ಗಂಡನ ನಡವಳಿಗೆ ಮೂರು ದಿನವಾದ್ರು ಸರಿಹೋಗದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕಳೆದ ವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಯುವತಿಯೊಬ್ಬಳು ತನ್ನ ಊರಿನ ಹುಡುಗನ ಜೊತೆ ಮದುವೆಯಾಗಿದ್ದಳು, ಆದ್ರೆ ಮದುವೆಯಾದ ಮಾರನೇ ದಿನ ಗಂಡು ಹೆಣ್ಣನ್ನು ಮೊದಲ ರಾತ್ರಿ ಒಂದೇ ಕೋಣೆಯಲ್ಲಿ ಮನೆಯ ಹಿರಿಯರು ಬಿಟ್ಟಿದ್ದರು, ಇನ್ನು ಯುವತಿ ಹಾಲು ಹಿಡಿದು ಗಂಡನ ಬಳಿ ಹೋಗಿದ್ದು , ಪತಿಗೆ ಹಾಲನ್ನು ನೀಡಿದ್ದಾಳೆ, ಆದ್ರೆ ಪತಿರಾಯ ಹಾಲು ಕುಡಿದ ಕೂಡಲೇ ಮಲಗಿಕೊಂಡಿದ್ದಾನೆ , ಗಂಡ ಮಲಗಿದ್ದನ್ನು ನೋಡಿ ಆಶ್ಚರ್ಯಗೊಂಡ ಪತ್ನಿ ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ, ಪತಿರಾಯ ನನಗೆ ಆ ರೀತಿಯ ಭಾವನೆಗಳಿಲ್ಲ, ನನಗೆ ಇವೆಲ್ಲಾ ಇಷ್ಟವಿಲ್ಲ ಎಂದು ಹೇಳಿ ಮತ್ತೆ ಮಲಗಿಕೊಂಡಿದ್ದಾನೆ. ಆದರೂ ಪತ್ನಿ ಸ್ವಲ್ಪ ದಿನ ಕಾದು ನೋಡೋಣ ಎಂದು ಮೂರು ದಿನ ಕಾದರು ತನ್ನ ಪತಿರಾಯನ ಸ್ವಭಾವದಲ್ಲಿ ಯಾವುದೇ ಬದಲಾವಣೆಗಳು ಕಾಣದನ್ನು ಕಂಡು ತನ್ನ ಪೋಷಕರಿಗೆ ಕರೆಮಾಡಿ ಮೂರು ದಿನ ತನ್ನ ಕೋಣೆಯಲ್ಲಿ ನಡೆದ ವಿಚಾರವನ್ನು ಹಂಚಿಕೊಂಡಿದ್ದಾಳೆ. ಈ ವಿಷಯ ತಿಳಿದ ಗಂಡನ ಮನೆಯವರು ನನ್ನ ಮಗನ ಮೇಲೆ ಇಲ್ಲ ಸಲ್ಲದ ಆಪಾದನೆಗಳನ್ನು ಮಾಡಬೇಡ ಎಂದು ಸೊಸೆಯ ವಿರುದ್ಧ ಗಲಾಟೆಗಳನ್ನು ಮಾಡಿದ್ದರಿಂದಾಗಿ ಕೋಪ ಗೊಂಡ ಯುವತಿ ಪೊಲೀಸ್‌ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾಳೆ , ಸದ್ಯ ಈ ಪ್ರಕರಣ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top