ಪ್ಲೇ ಆಫ್ ಗೂ ಮುಂಚೆ RCBಗೆ ಶುರುವಾಯ್ತು ಟೆನ್ಶನ್

IPLನಲ್ಲಿ ಆರ್ ಸಿ ಬಿ ಪ್ಲೇ ಆಫ್ ಹಾದಿಯನ್ನು ಸುಗಮ‌ ಮಾಡಿಕೊಂಡು ಒಂದು ಮೆಟ್ಟಿಲು ಬಾಕಿ ಉಳಿದಿದೆ. ಈಗಾಗಲೇ ಬೌಲಿಂಗ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡೋ ಮೂಲಕ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.ಇನ್ನು ಕ್ರಿಕೆಟ್ ತಜ್ಞರು ಕೂಡ ಈ ಬಾರಿ ಐಪಿಎಲ್ ಕಪ್ ಗೆಲ್ಲುವಲ್ಲಿ ಆರ್ ಸಿ ಬಿ ಹಾಟ್ ಫೇವರಿಟ್ ಆಂತಾನೇ ಹೇಳ್ತಿದ್ದಾರೆ. ಈಗಾಗಲೇ ಐಪಿಎಲ್ ನ ಕೊನೆ ಹಂತಕ್ಕೆ ಬಂದಿದ್ದು, ಉತ್ತಮ ಪ್ರದರ್ಶನ ನೀಡ್ತಾ ಇರೋ ಆರ್ ಸಿ ಬಿಗೆ ಪ್ಲೇ ಆಫ್ ಹಂತದಲ್ಲಿ ಟೆನ್ಷನ್ ಶುರುವಾಗಿದೆ. ಹೌದು ಆರ್ ಸಿ ಬಿ ಈ ಬಾರಿ ಬೌಲಿಂಗ್ ವಿಭಾಗದಲ್ಲೂ ಸ್ಟ್ರಾಂಗ್ ಆಗಿದೆ. ಅದ್ರಲ್ಲೂ ನವದೀಪ್ ಸೈನಿ ಈ ಬಾರಿ ಪ್ರಮುಖ ಪಾತ್ರವಹಿಸಿದ್ದು,ಮುಂಬೈ ವಿರುದ್ಧದ ಪಂದ್ಯದಲ್ಲಿ ಸೈನಿ ಆಡೋದು ದೌಟ್ ಆಗಿದೆ.ಹೌದು ಕಳೆದ ಮ್ಯಾಚ್ ನಲ್ಲಿ ಮುಂಬೈ ವಿರುದ್ಧ ಸೂಪರ್ ಓವರ್ ನಲ್ಲಿ ಸೂಪರ್ ಬೌಲಿಂಗ್ ಮಾಡಿ ತಂಡದ ಗೆಲುವಿಗೆ ಕಾರಣವಾಗಿದ್ದ ಸೈನಿ‌ ನಾಳೆಯ ಪಂದ್ಯದಲ್ಲಿ ಆಡೋದು ಅನುಮಾನವಾಗಿದೆ.ಅವರ ಬಲಗೈಗೆ ಗಾಯವಾಗಿದ್ದು,ಈಗಾಗಲೇ ಐದು ಹೊಲಿಗೆ ಹಾಕಲಾಗಿದೆ,ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 18ನೇ ಓವರ್ ಬೌಲಿಂಗ್ ಮಾಡುವ ವೇಳೆ ಧೋನಿ ಹೊಡೆತ ಬಾಲ್ ಹಿಡಿದಾಗ ಸೈನಿ ಗಾಯಕ್ಕೆ ಒಳಗಾಗಿದ್ರು, ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಸೈನಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆಡೋದು ಅನುಮಾನವಾಗಿದೆ.ಹೀಗಾಗಿ ಪ್ಲೇ ಆಫ್ ಹಂತದಲ್ಲಿ ಆರ್ ಸಿ ಬಿಗೆ ಸೈನಿ ಅನುಪಸ್ಥಿತಿಯ ಟೆನ್ಷನ್ ಶುರುವಾಗಿದೆ.ಇನ್ನು ಸೈನಿ ಸ್ಥಾನದಲ್ಲಿ ಯಾವ ಬೌಲರ್ ನ ಆಡಿಸೋದು ಅನ್ನೋ‌ ತಲೆನೋವು ವಿರಾಟ್ ಗೆ ಉಂಟಾಗಿದ್ದು, ಉಮೇಶ್ ಯಾದವ್ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

ಹಾಗಾದ್ರೆ ನವದೀಪ್ ಸೈನಿ ಅನುಪಸ್ಥಿತಿ ಆರ್ ಸಿ ಬಿ ಕಾಡಲಿದ್ಯ,ತಂಡ ಉಮೇಶ್ ಯಾದವ್ ಕಣಕ್ಕಿಳಿಸುವುದರ ಬಗ್ಗೆ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top