ಪ್ಲೇ ಆಫ್‌ಗಾಗಿ ಪಂಜಾಬ್‌ ಹೋರಾಟ..ಮತ್ತೆ ಸೂಪರ್‌ ಓವರ್‌ ಆಗುತ್ತಾ..?

ಐಪಿಎಲ್‌ 2020 ಎರಡನೇ ಹಂತದ ಪಂದ್ಯಗಳು ನಡೀತಾ ಇದ್ದು ಟಾಪ್‌ ನಾಲ್ಕು ಸ್ಥಾನದಲ್ಲಿ ಡೆಲ್ಲಿ,ಮುಂಬೈ,ಆರ್‌ಸಿಬಿ,ಕೆಕೆಆರ್‌ ಇದ್ದರೆ, ಇತ್ತ ಕೆಲಳಗಿನ ನಾಲ್ಕು ಸ್ಥಾನ ಪಡೆದುಕೊಂಡಿರೋ ಫ್ಲೇ ಆಫ್‌ ಕನಸಿಗಾಗಿ ಹೋರಾಟ ನಡೆಸುತ್ತಿವೆ. ಇಂದಿನ ಪಂದ್ಯದಲ್ಲಿ ಈಗಾಗಲೇ ಪ್ಲೇ ಆಫ್‌ಗೆ ಕಾಲು ಇಟ್ಟಿರೋ ಡೆಲ್ಲಿ ಮತ್ತು ಪ್ಲೇ ಆಫ್‌ಗಾಗಿ ಹೋರಾಟ ನಡೆಸುತ್ತಿರೋ ಪಂಜಾಬ್‌ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ಈಗಾಗಲೇ ಡೆಲ್ಲಿ ಪಂಜಾಬ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಗೆದ್ದು ವಿಶ್ವಾಸದಲ್ಲಿದ್ರೆ, ಇತ್ತ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಪಂಜಾಬ್‌ ತಂಡವಿದೆ. ಕೆಎಲ್‌ ರಾಹುಲ್‌,ಮಯಾಂಕ್‌ ಅಗರ್‌ವಾಲ್‌ರ ಉತ್ತಮ ಪ್ರದರ್ಶನ ಮತ್ತು ಯೂನಿವರ್ಸಲ್‌ ಬಾಸ್‌ ಅವರ ಎಂಟ್ರಿಯಿಂದಾಗಿ ಪಂಜಾಬ್‌ ತಂಡ ಬಲಿಷ್ಠವಾಗಿದ್ರು, ಪಂದ್ಯ ಗೆಲುವಲ್ಲಿ ಮಾತ್ರ ಸಖತ್‌ ಫೈಟ್‌ ಕೊಡ್ತಾ ಇದೆ.

ಈಗಾಗಲೇ ತಾವು ಆಡಿರೋ ಎಲ್ಲಾ ಪಂದ್ಯಗಳಲ್ಲೂ ಗೆಲುವಿನ ಹತ್ತಿರ ಬಂದು ಕೆಲವು ಪಂದ್ಯಗಳನ್ನು ಸೋತಿದ್ದರೆ, ಇನ್ನು ಕೆಲವು ಪಂದ್ಯಗಳನ್ನು ರೋಚಕವಾಗಿ ಗೆಲುವನ್ನು ಸಾಧಿಸಿಕೊಂಡಿದ್ದಾರೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರೋ ಪಂಜಾಬ್‌ ಸತತ ಗೆಲುವಿನ ಮೂಲಕ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಳ್ಳ ಬೇಕಾಗಿದ್ದು, ಇಂದು ನಡೆಯಲಿರೋ ಡೆಲ್ಲಿ ವಿರುದ್ಧದ ಪಂದ್ಯ ಮಹತ್ವದಾಗಿದೆ.

ಇನ್ನು ಪಂಜಾಬ್‌ ಪಂದ್ಯ ಇತ್ತು ಅಂದ್ರೆ ಅಲ್ಲಿ ಮ್ಯಾಚ್‌ ರೋಚಕವಾಗಿ ಕೂಡಿರೋ ಜೊತೆಯಲ್ಲಿ ಸಖತ್‌ ಎಂಟರ್‌ಟೈನ್‌ ಆಗಿರುತ್ತದೆ. ಈಗಾಗಲೇ ತಾವು ಆಡಿರೋ ೯ ಪಂದ್ಯದಲ್ಲಿ ಮೂರು ಸೂಪರ್‌ ಓವರ್‌ಗಳನ್ನು ಆಡೋ ಮೂಲಕ ಒಂದೇ ಸೀಸನ್‌ನಲ್ಲಿ ಹೆಚ್ಚು ಸೂಪರ್‌ ಓವರ್‌ ಆಡಿದ ತಂಡ ಅನ್ನೋ ದಾಖಲೆಯನ್ನು ಬರೆದಿದೆ. ಅಷ್ಟೇ ಅಲ್ಲದೇ ಒಂದೇ ಪಂದ್ಯದಲ್ಲಿ ಎರಡು ಸೂಪರ್‌ ಓವರ್‌ ಆಡಿರೋ ದಾಖಲೆ ಕೂಡ ಇವರ ಹೆಸರಿನಲ್ಲಿದ್ದು, ಸೂಪರ್‌ ಓವರ್‌ ಅಂದ್ರೆ ಅದು ಪಂಜಾಬ್‌ ತಂಡಕ್ಕೆ ಅನ್ನೋ ಮಾತುಗಳನ್ನ ಹೇಳ್ತಿದ್ದಾರೆ. ಈಗಾಗಲೇ ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿ ಸೂಪರ್‌ ಓವರ್‌ನಲ್ಲಿ ಸೋಲನುಭವಿಸಿದ ಪಂಜಾಬ್‌ ಇಂದಿನ ಪಂದ್ಯದಲ್ಲೂ ಸೂಪರ್‌ ಓವರ್‌ಗೆ ಅಣಿಯಾಗುತ್ತಾ ಅನ್ನೋ ಕುತೂಹಲ ಇದೀಗ ಕ್ರಿಕೆಟ್‌ ಪ್ರಿಯರಲ್ಲಿ ಮನೆಮಾಡಿದೆ.

ಒಟ್ಟಿನಲ್ಲಿ ತಂಡದ ನಾಯಕ ಕೆಎಲ್‌ ರಾಹುಲ್‌,ಮಾಯಾಂಕ್‌ ಉತ್ತಮ ಪ್ರದರ್ಶನ ಗೇಲ್‌ ಬಲ ಎಲ್ಲಾ ಇದ್ದರೂ ಗೆಲುವಿನ ಡದ ಸೇರುವಲ್ಲಿ ಕೊಂಚ ಎಡವುತ್ತಿರೋ ಪಂಜಾಬ್‌ ಇಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸೋ ಮೂಲಕ ಸೋಲಿನ ಸೇಡು ತೀರಿಸಿಕೊಂಡು ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಕೊಳ್ಳುತ್ತಾ ಕಾದುನೋಡಬೇಕು.

ನಿಮ್ಮ ಪ್ರಕಾರ ಪಂಜಾಬ್‌ ಡೆಲ್ಲಿ ಪಂದ್ಯದಲ್ಲಿ ನಿಮ್ಮ ಫೇವರೆಟ್‌ ತಂಡ ಯಾವುದು, ೧೧ ಆಟಗಾರರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಗಿಟ್ಟಿಸಿಕೊಳ್ತಾರೆ ,ಇವತ್ತಿನ ಮ್ಯಾಚ್‌ ಕೂಡ ಸೂಪರ್‌ ಓವರ್‌ ಆಗಲಿದ್ಯಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top