ಪ್ರೇಮಿಗಳ ದಿನದಂದು ಈ ಪ್ರೇಮಿಗಳ ಮದುವೆ- ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಯಶ್‌

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಕ್ಯೂಟ್‌ ಜೋಡಿ ಹಸೆಮಣೆ ಏರೋದಕ್ಕೆ ತಯಾರಿಯನ್ನು ನಡೆಸಿಕೊಳ್ತಾ ಇದೆ. ಲವ್‌ ಮಾಕ್‌ಟೇಲ್‌ನಲ್ಲಿ ಎಲ್ಲರನ್ನು ಮೋಡಿ ಮಾಡಿದ್ದ ಆದಿ ಮತ್ತು ನಿಧಿಮಾ ಪಾತ್ರ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ಹಸೆಮಣೆ ಏರಲು ರೆಡಿಯಾಗುತ್ತಿದ್ದಾರೆ. ಹಲವು ವರ್ಷಗಳಿಂದ ಇಬ್ಬರು ಪ್ರೀತಿ ಮಾಡ್ತಾ ಇದ್ದು ಈ ಲವ್‌ ಬರ್ಡ್ಸ್‌ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮುಂದಿನ ವರ್ಷ ಪ್ರೇಮಿಗಳ ದಿನದಂದು ಈ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಡಾರ್ಲಿಂಗ್‌ ಕೃಷ್ಣ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರ ಫೋಟೋ ಜೊತೆಯಲ್ಲಿ ವಿಷಯವನ್ನು ಶೇರ್‌ ಮಾಡಿಕೊಂಡಿದ್ದು ,ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈ ಜೋಡಿ ಮದುವೆಯಾಗುತ್ತಿದ್ದು, ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ವಿವಾಹ ನಡೆಯಲಿದೆ. ಸದ್ಯ ಲವ್‌ ಮಾಕ್‌ಟೇಲ್‌ ಸಕ್ಸಸ್‌ನಲ್ಲಿ ಲವ್‌ ಮಾಕ್‌ಟೇಲ್‌ ೨ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಹ ಈ ಜೋಡಿ ಹಕ್ಕಿ ರೆಡಿಯಾಗುತ್ತಿದ್ದಾರೆ.

ಸ್ಯಾಂಡಲ್‌ವುಡನ ಮುಂದಿನ ಸುದ್ದಿ ನೋಡೋದಾದ್ರೆ, ನಟಭಯಂಕರ ಡಾಲಿ ಧನಂಜಯ್‌ ಅಭಿನಯದ ʻರತ್ನನ್‌ ಪ್ರಪಂಚʼ ಚಿತ್ರದಲ್ಲಿ ನಟಿಸ್ತಾ ಇರೋದು ಎಲ್ಲರಿಗೂ ಗೊತ್ತಿದೆ. ರೋಹಿತ್‌ ಪದಕಿ ನಿರ್ದೇಶನದಲ್ಲಿ ಬರ್ತಾ ಈ ಸಿನಿಮಾದ ಶೂಟಿಂಗ್‌ ಇದೀಗ ಶುರುವಾಗಲಿದ್ದು ನವೆಂಬರ್‌ 9ರಿಂದ ರತ್ನನ್‌ ಪ್ರಪಂಚಕ್ಕೆ ಡಾಲಿ ಧನಂಜಯ್‌ ಎಂಟ್ರಿಕೊಡ್ತಾ ಇದ್ದಾರೆ. ದಯವಿಟ್ಟು ಗಮನಿಸಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರೋಹಿತ್‌ ಪದಕಿ ಇದೀಗ ರತ್ನನ್‌ ಪ್ರಪಂಚ ತೋರಿಸಲು ಹೊರಟ್ಟಿದ್ದು, ಡಾಲಿಗೆ ಇಲ್ಲಿ ರೆಬಾ ಮೋನಿಕಾ ಜೋಡಿಯಾಗಿದ್ದಾರೆ. ಇನ್ನು ಚಿತ್ರಕ್ಕೆ ಅಜನೀಶ್‌ ಲೋಕ್‌ನಾಥ್‌ ಮ್ಯೂಸಿಕ್‌ ಮೋಡಿ ಮಾಡಲಿದ್ದಾರೆ.

ಗಾಂಧಿನಗರದಲ್ಲಿ ಇದೀಗ ಒಂದು ಸುದ್ದಿ ಸಖತ ಜೋರಾಗಿ ಓಡಾಡುತ್ತಿದೆ. ಹೌದು ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾದ ಬಗ್ಗೆ ದೊಡ್ಡ ಸುದ್ದಿ ವೈರಲ್‌ ಆಗಿದೆ. ಕೆಜಿಎಫ್‌ ೨ ಇನ್ನೇನೂ ಕೊನೆಯ ಹಂತದ ಶೂಟಿಂಗ್‌ಗೆ ಬಂದಿದ್ದು, ಮುಂದಿನ ವರ್ಷ ರಿಲೀಸ್‌ ಆಗಲಿದೆ.ಇದೀಗ ಯಶ್‌ ಕೆಜಿಎಫ್‌ 2 ನಂತರದ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದ್ದು, ಯಶ್‌ ಮುಂದಿನ ಸಿನಿಮಾವನ್ನು ಪೂರಿ ಜಗನ್ನಾಥ್‌, ಮಫ್ತಿ ಖ್ಯಾತಿಯ ನರ್ತನ್‌ ಡೈರೆಕ್ಷನ್‌ನಲ್ಲಿ ಬರಲಿದೆ ಅನ್ನೋ ಮಾತುಗಳು ಕೇಳಿ ಬರ್ತಾ ಇತ್ತು, ಆದ್ರೆ ಇದೀಗ ಇಂಡಿಯನ್‌ ಸಿನಿಮಾದ ಸ್ಟಾರ್‌ ಡೈರೆಕ್ಟರ್‌ ಒಬ್ಬರು ಯಶ್‌ ಮುಂದಿನ ಸಿನಿಮಾ ಡೈರೆಕ್ಷನ್‌ ಮಾಡಲಿದ್ದಾರೆ. ಅನ್ನೋ ಸುದ್ದಿ ವೈರಲ್‌ ಆಗಿದೆ. ಶಂಕರ್‌ ನಿರ್ದೇಶನದಲ್ಲಿ ಯಶ್‌ ನಟಿಸಲಿದ್ದಾರೆ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಇದು ಮಲ್ಟಿಸ್ಟಾರರ್‌ ಸಿನಿಮಾ ಆಗಿದ್ದು, ಇದರಲ್ಲಿ ಪ್ರಮುಖ ಪಾತ್ರದಲ್ಲಿ ಯಶ್‌ ನಟಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ಸದ್ಯ ಇಂಡಿಯನ್‌ ೨ ಸಿನಿಮಾದಲ್ಲಿ ಬ್ಯೂಸಿಯಾಗಿರೋ ಶಂಕರ್‌ ಈ ಚಿತ್ರದ ಜೊತೆಯಲ್ಲಿ ಯಶ್‌ ಮುಂದಿನ ಸಿನಿಮಾದ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿದೆ. ಇನ್ನು ಯಶ್‌ ಜೊತೆಯಲ್ಲಿ ವಿಜಯ್‌ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ದೊಡ್ಡ ತಾರಾ ಬಳಗ ಇರೋ ಸಿನಿಮಾದ ಬಗ್ಗೆ ಇನ್ನು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಸದ್ಯದರಲ್ಲೇ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹೊರಬೀಳಲಿದೆ ಅಂತ ಹೇಳಲಾಗುತ್ತಿದೆ. ಇನ್ನು ಈ ಸಿನಿಮಾವನ್ನು ಕನ್ನಡ,ತಮಿಳು,ತೆಲುಗಿ, ಹಿಂದಿಯಲ್ಲಿ ತಯಾರಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top