
ಪ್ರೇಮಿಯೊಬ್ಬ ತಾನು ಪ್ರೀತಿಸಿದ ಹುಡುಗಿಗಾಗಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರದ ಜಂಗಾರೆಡ್ಡಿಗೂಡಂನಲ್ಲಿ ಈ ಘಟನೆ ನಡೆದಿದ್ದು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಪೊಲೀಸರು ಯುವಕನನ್ನು ಮನವೊಲಿಸಿ ಟವನ್ನಿಂದ ಕೆಳಗೆ ಇಳಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸರ ಮಾತಿಗೆ ಟವರ್ ಇಳಿಯುತ್ತಿದ್ದ ಪಾಗಲ್ ಪ್ರೇಮಿ ರೋಹಿತ್ ಮೇಲೆ ಹೆಚ್ಚೇನುಗಳು ದಾಳಿ ನಡೆಸಿದ್ದು, ಈ ವೇಳೆ ರೋಹಿತ್ ಪಕ್ಕದಲ್ಲಿದ್ದ ಕಲ್ಯಾಣ ಮಂಟಪದ ಮೇಲೆ ಹಾರಿದ್ದಾನೆ. ಗಾಯಗೊಂಡ ರೋಹಿತ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.