ಪ್ರಿಯತಮನ ಜೊತೆ ಹೆಂಡತಿ ಹೋಟೆಲ್‌ ರೂಮ್‌ನಲ್ಲಿ ದಿಢೀರ್‌ ಎಂಟ್ರಿ ಕೊಟ್ಟ ಪತಿ..!

ಮದುವೆಯಾಗಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಹೋಟೆಲ್‌ ರೂಮ್‌ನಲ್ಲಿ ತಂಗಿದ್ದ ವೇಳೆ ಪತಿಯ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಹಾಕಿಕೊಂಡಿರೋ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ತಾಜ್‌ಗಂಜ್‌ ಪ್ರದೇಶದ ಹೋಟೆಲ್‌ ಒಂದರಲ್ಲಿ ತಂಗಿದ್ದ ಪ್ರಿಯಕರ ಮತ್ತು ಪತ್ನಿಯನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತಿ ಪತ್ನಿಗೆ ಚಪ್ಪಲಿಯಿಂದ ಥಳಿಸಿದ್ದಾನೆ. ಸದ್ಯ ಚಪ್ಪಲಿಯಲ್ಲಿ ಥಳಿಸಿರೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪತಿಗೆ ಪತ್ನಿ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿರೋ ಬಗ್ಗೆ ಅನುಮಾನ ಶುರುವಾಗಿತ್ತು. ಮಂಗಳವಾರ ತನ್ನ ಪತ್ನಿ ಪ್ರಿಯಕರನ ಜೊತೆ ಹೋಟೆಲ್‌ಗೆ ಬಂದಿದ್ದಳು, ಇಬ್ಬರು ಒಂದು ರೂಮ್‌ ಬುಕ್‌ ಮಾಡಿ ಅಲ್ಲಿ ಉಳಿದುಕೊಂಡಿದ್ದರು . ಈ ವಿಷಯ ತಿಳಿದ ಪತಿ ಪತ್ನಿ ಹೋಗಿದ್ದ ಹೋಟೆಲ್‌ ಹೋಗಿ ಆಕೆ ಮತ್ತು ಪ್ರಿಯಕರ ತಂಗಿದ್ದ ರೂಮ್‌ಗೆ ಏಕಾಏಕಿ ನುಗ್ಗಿ ಇಬ್ಬರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾನೆ. ಇನ್ನು ಪತಿ ರೂಮಿಗೆ ಎಂಟ್ರಿ ಕೊಡುತ್ತಿದ್ದಂತೆ ಪ್ರಿಯಕರ ಎಸ್ಕೇಪ್‌ ಆಗಿದ್ದಾನೆ. ಇನ್ನು ಅನುಮಾನದಿಂದಲೇ ಪತಿ ಸಂಬಂಧಿಕರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದನ್ನು, ಸಿಕ್ಕಿಹಾಕಿಕೊಂಡ ಪತ್ನಿಗೆ ಪತಿ ಚಪ್ಪಲಿಯಿಂದ ಹೊಡೆಯುತ್ತಿರೋ ವಿಡಿಯೋ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹೋಗಿದ್ದಾರೆ. ಆದರೆ ಇಬ್ಬರ ಮನೆಯವರು ಯಾರ ಮೇಲೂ ದೂರು ನೀಡುವುದಿಲ್ಲ ಎಂದಯ ಹೇಳಿದ್ದಾರೆ. ಈ ಕಾರಣಕ್ಕಾಗಿ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಸದ್ಯ ಪತಿ ಚಪ್ಪಲಿಯಲ್ಲಿ ಪತ್ನಿಗೆ ಹೊಡೆಯುತ್ತಿರೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top