ಪ್ರಿಯಕರ ಫೋನ್‌ ರಿಸೀವ್‌ ಮಾಡ್ಲಿಲ್ಲ..ಪ್ರಿಯತಮೆ ಸತ್ತಳು..ಇತ್ತ ಪ್ರಿಯತಮನೂ ಸತ್ತ..!

ಪ್ರಿಯತಮ ತನ್ನ ಮೊಬೈಲ್‌ ರಿಸೀವ್‌ ಮಾಡ್ಲಿಲ್ಲ ಎಂದು ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ. ರೇಖಾ ಮತ್ತು ವಿಷ್ಣು ಪಗಲಾಪುರ ಇಬ್ಬರು ಪ್ರೇಮಿಗಳಾಗಿದ್ದು, ಇವರಿಬ್ಬರು ಮನೆಯವರ ವಿರೋಧದ ನಡುವೆಯೂ ಐದು ತಿಂಗಳ ಹಿಂದೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಇಬ್ಬರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, 2020 ಏಪ್ರಿಲ್‌ನಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು, ಕಳೆದ ಬುಧವಾರ ರೇಖಾ ತನ್ನ ಪ್ರಿಯಕರ ವಿಷ್ಣು ಪಗಲಾಪುರನಿಗೆ ದಿನವಿಡೀ ಫೋನ್‌ ಕರೆ ಮಾಡಿದ್ದರು ವಿಷ್ಣು ತನ್ನ ಕರೆಯನ್ನು ರಿಸೀವ್‌ ಮಾಡಿಲ್ಲ ಎಂದು ನೊಂದ ರೇಖಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವಿಷಯ ತಿಳಿಯುತ್ತಿದ್ದಂತೆ ವಿಷ್ಣು ತನ್ನ ಅಜ್ಜಿ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಈ ವಿಚಾರವಾಗಿ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top