ಪ್ರಭಾಸ್‌ ʻಸಲಾರ್‌ʼ ಚಿತ್ರದಲ್ಲಿ ನಟಿಸೋಕೆ ಇಲ್ಲಿದೆ ನಿಮಗೆ ಅವಕಾಶ

ಪ್ಯಾನ್‌ ಇಂಡಿಯಾ ಡೈರೆಕ್ಷರ್‌ ಕೆಜಿಎಫ್‌ ಚಿತ್ರದ ಮಾಸ್ಟರ್‌ ಫೀಸ್‌ ಪ್ರಶಾಂತ್‌ ನೀಲ್‌ ಮುಂದಿನ ಪ್ಯಾನ್‌ ಇಂಡಿಯಾ ಸಿನಿಮಾ ಈಗಾಗಲೇ ಅನೌನ್ಸ್‌ ಆಗಿದೆ. ಪ್ರಭಾಸ್‌ಗೆ ಪ್ರಶಾಂತ್‌ ನೀಲ್‌ ಮುಂದಿನ ಸಿನಿಮಾದಲ್ಲಿ ಆಕ್ಷನ್‌ ಕಟ್‌ ಹೇಳುತ್ತಿದ್ದು, ಚಿತ್ರಕ್ಕೆ ʻಸಲಾರ್‌ʼ ಅನ್ನೋ ಹೆಸರು ಕೂಡ ಇಡಲಾಗಿದೆ. ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಕೂಡ ರಿಲೀಸ್‌ ಮಾಡಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಸಹ ಹುಟ್ಟಿದೆ. ಅಷ್ಟೇ ಅಲ್ಲದೇ ಪ್ರಶಾಂತ್‌ ನೀಲ್‌ ಕನ್ನಡದ ನಟರನ್ನು ಬಿಟ್ಟು ದಿಢೀರ್‌ ಎಂದು ಪರ ಭಾಷೆಯ ನಟನಿಗೆ ಸಿನಿಮಾ ಮಾಡ್ತಿರೋದಕ್ಕೆ ಒಂದಿಷ್ಟು ಪರ ವಿರೋಧಗಳು ಸಹ ಕೇಳಿ ಬರ್ತಾ ಇದೆ. ಹೀಗಿರುವಾಗಲೇ ಇದೀಗ ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಜೋಡಿಯ ʻಸಲಾರ್‌ʼ ಸಿನಿಮಾದಲ್ಲಿ ನಟಿಸೋದಕ್ಕೆ ನಿಮಗೀಗಾ ಚಾನ್ಸ್‌ ಸಿಗಲಿದೆ.

ಅದಕ್ಕಾಗಿ ಪ್ರಶಾಂತ್‌ ನೀಲ್‌ ಮತ್ತು ಹೊಂಬಾಳೆ ಫಿಲ್ಮ್‌ ವೇದಿಕೆಯನ್ನು ಕಲ್ಪಿಸಿಕೊಡ್ತಾ ಇದೆ. ಈ ವಿಚಾರವಾಗಿ ಹೊಂಬಾಳೆ ಫಿಲ್ಮ್‌ ಮತ್ತು ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದು ಇದೇ ಡಿಸೆಂಬರ್‌ 15ಕ್ಕೆ ಚಿತ್ರಕ್ಕೆ ಆಡೀಷನ್‌ ಕರೆದಿದ್ದಾರೆ. ಮೊದಲಿಗೆ ಆಡಿಷನ್ಸ್‌ ಹೈದರಬಾದ್‌ನಿಂದ ಶುರುಮಾಡಲು ಸಲಾರ್‌ ಚಿತ್ರತಂಡ ತೀರ್ಮಾನಿಸಿದ್ದು, ನಂತರ ಬೆಂಗಳೂರು ಮತ್ತು ಚೆನ್ನೈನಲ್ಲಿ ಆಡಿಷನ್ಸ್‌ ನಡೆಸಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಇನ್ನು ಈ ಬಾರಿಯು ಸಹ ಕೆಜಿಎಫ್‌ ಚಿತ್ರಕ್ಕೆ ಆಡಿಷನ್ಸ್‌ ನಡೆಸಿದ ರೀತಿ ಇಲ್ಲೂ ಕೂಡ ನಡೆಸಲಿದ್ದು, ಯಾವುದೇ ವಯೋಮಿತಿಯನ್ನು ಹಾಕಿಲ್ಲ. ಎಲ್ಲರಿಗೂ ಕೂಡ ಆಡಿಷನ್ಸ್‌ನಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ನಿಮಗೂ ಸಿನಿಮಾ ರಂಗದಲ್ಲಿ ಮಿಂಚೋ ಆಸೆ ಇದ್ಯಾ, ನೀವೂ ಕೂಡ ಪ್ರಭಾಸ್‌ ಜೊತೆಯಲ್ಲಿ ಪ್ರಶಾಂತ್‌ ನೀಲ್‌ ಡೈರೆಕ್ಷನ್‌ನಲ್ಲಿ ನಟಿಸೋಕೆ ಕನಸು ಕಾಣ್ತಾ ಇದ್ದೀರಾ ಹಾಗಾದ್ರೆ ಈಗಲೇ ನೀವೂ ಕೂಡ ತಯಾರಿಯನ್ನು ಮಾಡಿಕೊಳ್ಳಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top