ಪ್ರಜ್ವಲ್‌ಗೆ ಪಟ್ಟಕಟ್ಟಲು ಮುಹೂರ್ತ್‌ ಫಿಕ್ಸ್‌ ಮಾಡಿದ ದೊಡ್ಡ ಗೌಡ್ರು..!

ಲೋಕಸಭಾ ಮತ್ತುಉಪ ಚುನಾವಣೆಯಲ್ಲಿ ಸೋಲು ಕಂಡ ಮೇಲೆ ಜೆಡಿಎಸ್‌ ಪಕ್ಷದ ಸ್ಥಿತಿ ಶೋಚನೀಯವಾಗಿ ಇರುವಾಗಲೇ, ಪಕ್ಷವನ್ನು ಮತ್ತೆ ಸಂಘಟನೆಗೆ ಸದ್ದಿಲ್ಲದೆ ವೇದಿಕೆ ರೆಡಿ ಮಾಡಿಕೊಂಡಿದ್ದಾರೆ. ಹೌದು ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವಘಟಕದ ಅಧ್ಯಕ್ಷರಾಗಿದ್ರು ನಿಖಿಲ್‌ ಪಕ್ಷ ಸಂಘಟನೆಯಲ್ಲಿ ಅಷ್ಟೇನೂ ಆಸಕ್ತಿಯನ್ನು ಹೊಂದಿಲ್ಲ. ಈ ಕಾರಣಕ್ಕಾಗಿ ಯುವಕರು ಕೂಡ ಬೇರೆ ಪಕ್ಷದ ಕಡೆ ವಾಲುತ್ತಿರುವುದರಿಂದ ಇದನ್ನು ತಡೆಗಟ್ಟುವ ಸಲುವಾಗಿ ಹಾಸನ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರನ್ನು ಯೂತ್‌ ಐಕಾನ್‌ ಆಗಿ ಬಿಂಬಿಸಲು ದೊಡ್ಡ ಗೌಡ್ರು ಮಾಸ್ಟರ್‌ ಪ್ಲಾನ್‌ ಮಾಡಿಕೊಂಡಿದ್ದಾರೆ.

ಈ ಕಾರಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷದ ನೆಲೆ ಕಂಡುಕೊಳ್ಳುವ ಸಲುವಾಗಿ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಕ್ರಾಂತಿಯ ನಂತರ ಒಂದು ತಿಂಗಳ ಉತ್ತರ ಕರ್ನಾಟಕದ ಪ್ರವಾಸ ನಡೆಸಲು ಪ್ಲಾನ್‌ ಮಾಡಿದ್ದು. ಈ ಮೂಲಕ ಪ್ರಜ್ವಲ್‌ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ನೊಂದಣಿ ಕಾರ್ಯವನ್ನು ಪ್ರಜ್ವಲ್‌ ನಡೆಸಲಿದ್ದಾರೆ. ಈ ಮೂಲಕ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದ ಯೂತ್‌ ಐಕಾನ್‌ ಎಂದು ಬಿಂಬಿಸಲು ದೊಡ್ಡ ಗೌಡ್ರು ಪ್ಲಾನ್‌ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಪಕ್ಷದ ಯುವಕರು ಕೂಡ ಪ್ರಜ್ವಲ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದರಿಂದ, ಮುಂದಿನ ದಿನಗಳಲ್ಲಿ ಪ್ರಜ್ವಲ್‌ ಅವರನ್ನು ಯುವ ಘಟಕದ ರಾಜ್ಯಾಧ್ಯಕ್ಷ ಮಾಡುವ ಪ್ಲಾನ್‌ ಕೂಡ ದೊಡ್ಡ ಗೌಡರದ್ದು. ಈ ಎಲ್ಲಾ ಬೆಳವಣಿಗಗಳು ಯಶಸ್ವಿಯಾಗಿ ನಡೆದಲ್ಲಿ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ ಪಕ್ಷದ ಭಾವಿ ನಾಯಕ ಅನ್ನೋದರಲ್ಲಿ ಅಚ್ಚರಿಯೆ ಇಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top