ಪ್ರಕೃತಿಯ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ರಾಯಚೂರು ಜಿಲ್ಲೆ..

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ರಾಮನಾಳ ಗ್ರಾಮದಲ್ಲಿ ಒಂದು ಅಪರೂಪದ ವಿಸ್ಮಯ ದೃಶ್ಯ ಕಂಡು ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

ರಾಮನಾಳ ಗ್ರಾಮದಲ್ಲಿ ಸುಂಟರಗಾಳಿ ಬೀಸಿದ್ದು,ಒಂದು ಕಡೆ ಸುಂಟರಗಾಳಿ ಬೀಸುತ್ತಿದ್ದರೆ ಇನ್ನೊಂದು ಕಡೆ ಆಕಾಶದಿಂದ ಸುರುಳಿಯಾಕಾರದಲ್ಲಿ ಮೋಡ ಭೂಮಿಗೆ ಇಳಿಯುತ್ತಿರೋ ದೃಶ್ಯ ನೋಡಿ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಇನ್ನು ಈ ಗಾಳಿಯನ್ನು ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದು, ಇದು ಸುಳಿಗಾಳಿ ದೆವ್ವದ ಗಾಳಿ ಎಂದು ಕರೆಯುತ್ತಿದ್ದಾರೆ. ಇನ್ನು ಆಕಾಶದಲ್ಲಿ ಸುರಳಿ ಮೋಡ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈ ವಿಡಿಯೋವನ್ನು ಮೊಬೈಲ್‌ನಲ್ಲಿ ಗ್ರಾಮಸ್ಥರು ಸೆರೆಹಿಡಿದಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top