ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನಲ್ಲಿ ನಟಿಸ ಬೇಕಾ ಹಾಗಾದ್ರೆ ಹೀಗೆ ಮಾಡಿ..

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನಲ್ಲಿ ನಿಮಗೆ ನಟಿಸೋ ಆಸೆ ಇದ್ಯಾ..ಹಾಗಾದ್ರೆ ಈಗ್ಲೇ ರೆಡಿಯಾಗಿ. ಹೌದು ಪಿಆರ್‌ಕೆ ಪ್ರೊಡಕ್ಷನ್‌ನ ಮುಂದಿನ ಸಿನಿಮಾ ಅಂದ್ರೆ ಅದು ಫ್ಯಾಮಿಲಿ ಪ್ಯಾಕ್‌ ಸಿನಿಮಾ. ಲಿಖಿತ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸ್ತಾ ಇರೋ ಈ ಚಿತ್ರಕ್ಕೆ ಅರ್ಜುನ್‌ ಕುಮಾರ್‌ ನಿರ್ದೇಶನದಲ್ಲಿ ಬರ್ತಾ ಇರೋ ಈ ಸಿನಿಮಾಗೆ ಇದೀಗ ನಟ ನಟಿಯರು ಬೇಕಾಗಿದ್ದು, ನಿಮಗೆ ನಟನೆ ಬಗ್ಗೆ ಆಸಕ್ತಿಯಿದ್ದು, ನೀವು ಉತ್ತಮ ನಟನಾಗಿದ್ದರೆ. ನಿಮ್ಮ ಸ್ವಂತ ನಟನೆಯ ಒಂದು ವಿಡಿಯೋವನ್ನು ಒಂದು ನಿಮಿಷ ಮೀರದಂತೆ ಕಳುಹಿಸಿ. ೧೮ ವರ್ಷದಿಂದ ೫೦ ವರ್ಷದ ವರೆಗಿನವರು ನಟನೆ ಬಗ್ಗೆ ತಿಳಿದವರು ಇದರಲ್ಲಿ ಭಾಗವಹಿಸಬಹುದು. ನಿಮಗೂ ಪುನೀತ್‌ ರಾಜ್‌ಕುಮಾರ್‌ ಪ್ರೊಡಕ್ಷನ್‌ನಲ್ಲಿ ನಟಿಸಬೇಕು ಅನ್ನೋ ಆಸೆ ಇದ್ದರೆ. ಈ ಕೂಡಲೇ ಕೆಳಗೆ ಇರೋ ವಿಳಾಸಕ್ಕೆ ನಿಮ್ಮ ಸ್ವಂತ ನಟನೆಯ ಒಂದು ನಿಮಿಷದ ವಿಡಿಯೋವನ್ನು ಕಳುಹಿಸಿ. ಫ್ಯಾಮಿಲಿ ಪ್ಯಾಕ್‌ ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top