`ಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಟೀಸರ್‌ಗೆ ಫಿದಾ ಆದ ರಾಮ್‌ಗೋಪಾಲ್‌ ವರ್ಮ..!

ಸ್ಯಾಂಡಲ್‌ವುಡ್‌ನ ʻರಾʼ ಸಿನಿಮಾದ ಮಾಸ್ಟರ್‌ ಮೈಂಡ್‌ ಸುಕ್ಕಾ ಸೂರಿ ನಿರ್ದೇಶನದಲ್ಲಿ ಬರ್ತಾ ಇರೋ ಸಿನಿಮಾ ʻಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಚಿತ್ರ ಶುರುವಾದಾಗಿನಿಂದಲೂ ಸೌಂಡ್‌ ಮಾಡ್ತಾ ಇದ್ದು, ಇಂದು ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ.. ಟ್ರೈಲರ್‌ ನೋಡಿದ ಸಿನಿರಸಿಕರಿಂದ ಮತ್ತು ಸ್ಯಾಂಡಲ್‌ವುಡ್‌ ಸ್ಟಾರ್‌ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ರಿಲೀಸ್‌ ಆದ ಈ ಟ್ರೈಲರ್‌ನಲ್ಲಿ ಬರೀ ದೃಶ್ಯ ವೈಭವವಿದ್ದು, ಫುಲ್‌ ರಗಡ್‌ ಲುಕ್‌ನಲ್ಲಿ ಇಡೀ ಟ್ರೈಲರ್‌ ಅನ್ನು ತೋರಿಸಲಾಗಿದೆ. ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್‌ ಪಕ್ಕಾ ಮಾಸ್‌ ಲುಕ್‌, ಟೆರರ್‌ ಲುಕ್‌ನಲ್ಲಿ ಕಾಣಸಿಕೊಂಡಿದ್ದು..ಸಂಭಾಷಣೆಯಿಲ್ಲದೆ ಕೇವಲ ರಾ ಮ್ಯೂಸಿಕ್‌ ಮೇಲೆ ಟ್ರೈಲರ್‌ ಮೂಡಿ ಬಂದಿದೆ.. ಹೇಳಿ ಕೇಳಿ ಸೂರಿ ಅಂದ್ರೆ ಅಲ್ಲಿ ರಾ ಎಲಿಮೆಂಟ್‌ ಇರಲೇ ಬೇಕು. ಅದೇ ರೀತಿ ಈ ಚಿತ್ರವನ್ನು ನಿರ್ದೇಶಿಸಿರೋ ಸುಕ್ಕಾ ಸೂರಿಗೆ, ಮ್ಯೂಸಿಕ್‌ ಮೂಲಕ ಸಾಥ್‌ ನೀಡಿದ್ದಾರೆ ಟಗರು ಖ್ಯಾತಿಯ ಚರಣ್‌ ರಾಜ್‌..ಸುದೀರ್‌ ಚಿತ್ರ ಬಂಡವಾಳ ಹೂಡಿದ್ದು ಡಾಲಿ ಸೂರಿ ಇಲ್ಲಿ ನಾಯಕನಾಗಿ ಕಾಣಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ಟ್ರೈಲರ್‌ ನೋಡಿದ ಸಿನಿರಸಿಕ ಮಿಠಾಯಿ ಸೂರಿ, ಡಾಲಿ ಧನಂಜಯ್‌ ಅವರನ್ನು ಪಾಪ್‌ ಕಾರ್ನ್‌ ಮಂಕಿಟೈಗರ್‌ ಆಗಿ ಆದಷ್ಟು ಬೇಗ ತೋರಿಸ್ರಪ್ಪ ಅಂತ ಹೇಳ್ತಾ ಇದ್ದಾರೆ.

ಟೀಸರ್‌ ನೋಡಿ ಮೆಚ್ಚಿಕೊಂಡ ಆರ್‌ಜಿವಿ..!

ಇನ್ನು ಟೀಸರ್‌ ರಿಲೀಸ್‌ ಆಗುತ್ತಿದ್ದಂತೆ..ಟೀಸರ್‌ ನೋಡಿದ ಟಾಲಿವುಡ್‌ನ ರಾ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮ ಕೂಡ ಟ್ವೀಟ್‌ ಮಾಡಿದ್ದು. ʻ ವಿಭಿನ್ನ ಟೈಟಲ್‌ನ ಪಾಪ್‌ ಕಾರ್ನ್‌ ಮಂಕಿ ಟೈಗರ್‌ʼ ಸಿನಿಮಾದ ಟೀಸರ್‌ ಎಲ್ಲಾರು ತಪ್ಪದೇ ನೋಡಿ..ದುನಿಯಾ ಸೂರಿ ಮತ್ತೊಮ್ಮೆ ಟಗರು ತರಹದ್ದೇ ಇನ್ನೊಂದು ಬ್ಲಾಕ್‌ ಬಸ್ಟರ್ ಸಿನಿಮಾ ಕೊಡಲು ರೆಡಿಯಾಗಿದ್ದಾರೆ.ಎಂದು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.


ಸದ್ಯ ಟೀಸರ್‌ ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಿ ಒಳ್ಳೇ ವಿವ್ಯೂ ಪಡೆಯುವ ಮೂಲಕ ಸೌಂಡ್‌ ಮಾಡ್ತಾ ಇದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top