ಪಾಕ್‌ ಕ್ರಿಕೆಟರ್‌ ಫೋಟೋ ಬ್ಲರ್‌ ಮಾಡಿ ಫೋಟೋ ಅಪ್ಲೋಡ್‌ ಮಾಡಿದ ಗಂಗೂಲಿ

ಐಪಿಎಲ್‌ ಶುರುವಾಗಲು ದಿನಗಣನೆ ಆರಂಭವಾಗಿದ್ದು, ದುಬೈನಲ್ಲಿ ನಡೆಯುತ್ತಿರೋ ಐಪಿಎಲ್‌ಗೆ ಸಿದ್ಧತೆ ಹೇಗಿದೆ ಎಂದು ವೀಕ್ಷಿಸಲು ದುಬೈಗೆ ತೆರಗಳಿರೋ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಇದೀಗ ತಾವು ಅಪ್ಲೋಡ್‌ ಮಾಡಿರೋ ಫೋಟೋ ಒಂದು ಸಖತ್‌ ಸುದ್ದಿಯಾಗಿದೆ. ಗಂಗೂಲಿ ಶಾರ್ಜಾ ಸ್ಟೇಡಿಯಂಗೆ ಭೇಟಿನೀಡಿದ್ದು, ಈ ವೇಳೆ ಅಲ್ಲಿನ ಸಿಬ್ಬಂದಿಗಳು ಗಂಗೂಲಿ ಜೊತೆ ಗ್ರೂಪ್‌ ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಗಂಗೂಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದು ಅದರಲ್ಲಿ ಹಿಂದೆ ಇರೋ ಪಾಕ್‌ ಕ್ರಿಕೆಟರ್‌ಗಳ ಫೋಟೋವನ್ನು ಬ್ಲರ್‌ ಮಾಡಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಗಂಗೂಲಿ ಈ ರೀತಿ ಬ್ಲರ್‌ ಮಾಡಿ ಫೋಟೋವನ್ನು ಯಾಕೆ ಅಪ್ಲೋಡ್‌ ಮಾಡಿದ್ದಾರೆ ಅನ್ನೋ ಕಾರಣ ತಿಳಿದು ಬಂದಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top