ಪಾಕಿಸ್ತಾನಿಯರು ಭಾರತೀಯರನ್ನುನೋಡಿ ಕಲಿಯಿರಿ ಎಂದ ಪ್ರಧಾನಿ ಇಮ್ರಾನ್‌ ಖಾನ್‌..!

ಸದ್ಯ ಪಾಕಿಸ್ತಾನದ ಸ್ಥಿತಿ ಈಗ ಹೇಳತೀರದು ಸಂಕಷ್ಟದ ಪರಿಸ್ಥಿತಿಯಲ್ಲಿರೋ ಪಾಕ್‌ಗೆ ಈಗ ಭ್ರಷ್ಟಚಾರ ಕೂಡ ಒಂದು ಕಗ್ಗಂಟಾಗಿ ಹೋಗಿದೆ. ಪ್ರಧಾನಿ ಇಮ್ರಾನ್‌ ಖಾನ್‌ ಭ್ರಷ್ಟಚಾರ ಮತ್ತು ಆರ್ಥಿಕತೆ ಸುಧಾರಿಸಲು ಸತತ ಪ್ರಯತ್ನಗಳನ್ನು ಸಹ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿ ವಿದೇಶದಲ್ಲಿ ನೆಲೆಸಿ ವಿಲಾಸಿ ಜೀವನ ನಡೆಸುತ್ತಿರುವ ಪಾಕಿಸ್ತಾನಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ ಇಮ್ರಾನ್‌ ಖಾನ್‌.

ಭಾರತ ಮತ್ತು ಚೀನಾದ ಪ್ರಜೆಗಳನ್ನು ನೋಡಿ ಕಲಿಯಿರಿ. ಅವರು ವಿದೇಶದಲ್ಲಿ ನೆಲೆಸಿದ್ರು ಸಹ ತಮ್ಮ ತಾಯ್ನಾಡಿನಲ್ಲಿ ಹೂಡಿಕೆ ಮಾಡ್ತಾರೆ. ತಮ್ಮ ದೇಶದಲ್ಲಿ ತಮ್ಮ ಗಳಿಕೆಯನ್ನ ವಿನಿಯೋಗಿಸುತ್ತಾರೆ ಅವರನ್ನು ನೋಡಿ ಕಲಿಯಿರಿ ಎಂದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಿನ ಆಚರಣೆ ವೇಳೆ ಮಾತನಾಡಿದ ಇಮ್ರಾನ್‌ ಖಾನ್‌, ಅತಿಯಾದ ಭ್ರಷ್ಟಾಚಾರದಿಂದಾಗಿ ಪಾಕಿಸ್ತಾನ ಸಂಕಷ್ಟ ಎದುರಿಸುತ್ತಿದೆ. ನಾವು ಯುವಕರಿಗಾಗಿ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಜೊತೆ ಸಂಶೋಧನೆಗೆ ವ್ಯಯಿಸುವ ಹಣವನ್ನು ಅವರು ವಿದೇಶದಲ್ಲಿ ಐಷಾರಾಮಿ ಅರಮನೆ ಖರೀದಿಸಲು ಮತ್ತು ಅಲ್ಲಿನ ಬ್ಯಾಂಕ್‌ಗಳಲ್ಲಿ ಹಣವನ್ನು ಜಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top