ಪವರ್‌ ಸ್ಟಾರ್‌ ಭೇಟಿ ಮಾಡಿದ ಯುವ 01 ಚಿತ್ರ ತಂಡ..

ಯುವ 01 ಯುವರಾಜ್‌ಕುಮಾರ್‌ ಅಭಿನಯದ ಮೊದಲ ಸಿನಿಮಾ, ಈಗಾಗಲೇ ಫಸ್ಟ್‌ ಲುಕ್‌ ಮೂಲಕ ಸಖತ್‌ ಸದ್ದು ಮಾಡಿರೋ ಈ ಚಿತ್ರ, ಅಣ್ಣಾವ್ರ ಮನೆಯ ಮತ್ತೊಂದು ಕುಡಿ ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಟಿ ಮಾಡಲು ರೆಡಿಯಾಗ್ತಿದ್ದಾರೆ.

ಯುವರಾಜ್‌ಕುಮಾರ್‌ ಐತಿಹಾಸಿಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡಲು ರೆಡಿಯಾಗಿದ್ದು , ಇದಕ್ಕಾಗಿ ಚಿತ್ರತಂಡ ಸಖತ್‌ ವರ್ಕೌಟ್‌ ಮಾಡ್ತಿದ್ದೆ. ಈಗಾಗಲೇ ಐತಿಹಾಸಿಕ ಸಿನಿಮಾದಲ್ಲಿ ಕಾಣಸಿಕೊಳ್ತಾ ಇರೋ ಯುವರಾಜ್‌ಕುಮಾರ್‌, ಇಂದು ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿದ್ದು, ಚಿತ್ರತಂಡ ಒಂದಿಷ್ಟು ಟಿಪ್ಸ್‌ಗಳನ್ನು ಪಡೆದುಕೊಂಡಿದೆ. ಇನ್ನು ಯುವ 01 ಚಿತ್ರದ ಟೀಸರ್‌ ಕೂಡ ಸದ್ಯದರಲ್ಲೇ ಬಿಡುಗಡೆಯಾಗಲಿದ್ದು, ಸಿನಿ ರಸಿಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top