ಪವನ್ ಕಲ್ಯಾಣ್ ಜೊತೆ ನಟಿಸ್ತಿದ್ದಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಹೈದರಬಾದ್‍ನಲ್ಲಿ ಫ್ಯಾಟಂಮ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಕೋಟಿಗೊಬ್ಬ 3 ಚಿತ್ರ ತೆರೆಗೆ ಸಿದ್ಧವಾಗಿದ್ದು, ಇದೀಗ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾದ ಬಗ್ಗೆ ಟಾಕ್ ಶುರುವಾಗಿದೆ, ಆದ್ರೆ ಈ ಬಾರಿ ಅವ್ರು ತೆಲುಗಿನಲ್ಲಿ ಕಾಣಿಸಿಕೊಳ್ಳೋ ಬಗ್ಗೆ ಮಾತು ಕೇಳಿ ಬರ್ತಾ ಇದೆ. ಹೌದು ಈ ಬಾರಿ ಅವ್ರು ತೆಲುಗಿನ ಪವರ್‍ಸ್ಟಾರ್ ಪವನ್ ಕಲ್ಯಾಣ್ ಜೊತೆ ಕಿಚ್ಚು ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ.

ಹೌದು ಮಲೆಯಾಳಂನಲ್ಲಿ ಹೆಚ್ಚು ಟಾಕ್ ಆಗಿದ್ದ `ಅಯ್ಯಪ್ಪನುಂ ಕೊಶಿಯಮ್’ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ. ಸದ್ಯ ತೆಲುಗಿನಲ್ಲಿ ಈ ಸಿನಿಮಾಗೆ ಟೈಟಲ್ ಫೈನಲ್ ಆಗಿಲ್ಲ, ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಮಲೆಯಾಳಂನಲ್ಲಿ ಪೊಲೀಸ್ ಅಧಿಕಾರಿ ಅಯ್ಯಪ್ಪನ್ ನಯ್ಯರ್ ಪಾತ್ರವನ್ನು ಬಿಜು ಮೆನನ್ ನಿರ್ವಹಿಸಿದ್ದರು, ಕೊಶಿ ಕುರಿಯನ್ ಪಾತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿಭಾಯಿಸಿದ್ದಾರೆ. ಇದೀಗ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಬಿಜು ಮೆನನ್ ನಿರ್ವಹಿಸಿದ್ದ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸುತ್ತಿದ್ದು, ಕಿಚ್ಚು ಸುದೀಪ್ ಪೃತ್ವಿ ರಾಜ್ ಸುಕುಮಾರನ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇದ್ದು. ಕೊಶಿ ಕುರಿಯನ್ ಪಾತ್ರ ಕಿಚ್ಚ ಸುದೀಪ್‍ಗೆ ಹೊಂದಿಕೆ ಆಗುತ್ತದೆ ಎಂಬುದು ಚಿತ್ರತಂಡದ ಮಾತು.

ಇನ್ನು ಕಿಚ್ಚ ಸುದೀಪ್ ಆ ಪಾತ್ರದ ಬಗ್ಗೆ ಸಂತಸಗೊಂಡಿದ್ದು,ಹೀಗಾಗಿ ಸಿನಿಮಾ ಮತ್ತು ಕಿಚ್ಚ ಸುದೀಪ್ ಅಭಿನಯದ ಬಗ್ಗೆ ಕುತೂಹಲ ಮನೆಮಾಡಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಹಾಗೂ ಕಿಚ್ಚ ಸುದೀಪ್ ಒಂದೇ ಸಮ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಇನ್ನು ಅಯ್ಯಪ್ಪನುಂ ಕೊಶಿಯನ್ ಸಿನಿಮಾ ಕೇವಲ ತೆಲುಗಿನಲ್ಲಿ ಮಾತ್ರವಲ್ಲ,ತಮಿಳು ಹಾಗೂ ಹಿಂದಿಯಲ್ಲಿ ಸಹ ರಿಮೇಕ್ ಆಗುತ್ತಿದ್ದು ಇಲ್ಲೂ ಸಹ ಕಿಚ್ಚ ಸುದೀಪ್ ಅಭಿನಯಿಸುತ್ತಾರ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top