ಪರೀಕ್ಷೆ ಬರೆಯಲು ಕುದುರೆ ಸವಾರಿ ಮಾಡಿದ ವಿದ್ಯಾರ್ಥಿನಿ..!

ವಿದ್ಯಾರ್ಥಿಗಳಿಗೆ ಪರೀಕ್ಷೆ ಬಂತೆಂದರೆ ಅವರಿಗೆ ಎಲ್ಲಿಲ್ಲದ ಟೆನ್ಷನ್ ಇನ್ನು ಪರೀಕ್ಷಾ ಕೇಂದ್ರಕ್ಕೆ ಅರ್ಧಗಂಟೆ ಮುಂಚಿತವಾಗಿ ಹೋಗಿರ್ತಾರೆ.. ಇನ್ನು ಪರೀಕ್ಷೆಗೆ ಲೇಟದ್ರೆ ಮುಗಿದೆ ಹೋಯಿತು ಆ ವಿದ್ಯಾರ್ಥಿ ಜೀವವೇ ಹೋದಂತೆ ಆಗುತ್ತೆ.. ಇನ್ನು ಪರೀಕ್ಷೆಗೆ ಒಂದೊಂದು ವ್ಯವಸ್ಥೆ ಮೂಲಕ ತಲುಪುತ್ತಾರೆ.. ಆದ್ರೆ ಕೇರಳದಲ್ಲಿ ಒಂದು ಹುಡುಗಿ ಪರೀಕ್ಷೆಗೆ ಲೇಟ್ ಆದ ಕಾರಣ ತಾನು ಪರೀಕ್ಷಾ ಕೇಂದ್ರಕ್ಕೆ ಹೋಗಲು ಆಯ್ಕೆ ಮಾಡಿಕೊಂಡ ವಾಹನ ಮಾತ್ರ ವಿಚಿತ್ರವಾದದ್ದು ಹೌದು ಕೇರಳದ ತ್ರಿಶೂಲ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೆ ಲೇಟ್ ಆಯ್ತು ಅಂತ ಕುದುರೆ ಸವಾರಿ ಮಾಡಿಕೊಂಡು ಹೋಗಿ ಪರೀಕ್ಷೆ ಬರೆದಿದ್ದಾಳೆ. ಶಾಲಾ ಸಮವಸ್ತ್ರ ಧರಿಸಿ ಕುದುರೆ ಸವಾರಿ ಮಾಡಿಕೊಂಡು ಹೋಗಿ ಪರೀಕ್ಷೆ ಬರೆದಿದ್ದಾಳೆ ಈ ಹುಡುಗಿ, ಆಕೆ ಕುದುರೆ ಏರಿ ಪರೀಕ್ಷೆಗೆ ಹೋದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ .ಇನ್ನು ಈ ವಿಡಿಯೋ ನೋಡಿದ ಮಹೇಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹಿಂದ್ರಾ ಆಕೆ ಯಾರಿಗಾದ್ರು ಪರಿಚಯವಿದ್ದರೆ ಆಕೆಯ ಫೋಟೋ‌ ಆ ಕುದುರೆಯ ಪೋಟೋ ಕೊಡಿ ನಾನು ಪ್ರೋಫೈಲ್ ಹಾಕಿಕೊಳ್ಳುತ್ತೇನೆ ಆಕೆಯ ಧೈರ್ಯ ಮೆಚ್ಚ ಬೇಕು ಆಕೆಯೇ ನನ್ನ ಹೀರೊ ಅಂತ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top