ಪಬ್ ಜಿ ಆಡಲು ಸಾಧ್ಯವಾಗಿಲ್ಲ‌ ಎಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ‌ ಯುವಕ..

ಯುವಕನೊಬ್ಬ ಪಬ್ ಜಿ ಆಡಲು ಸಾಧ್ಯವಾಗಿಲ್ಲ‌ ಎಂದು ಮನೆಯ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.ಪ್ರೀತಂ ಎಂಬ ಯುವಕ‌ ಆತ್ಮಹತ್ಯೆ ಮಾಡಿಕೊಂಡಿರೋ ಯುವಕ ಎಂದು ಗುರುತಿಸಲಾಗಿದೆ. ಈ ಬಗ್ಗೆ ತಾಯಿ ಹೇಳಿಕೆ ನೋಡಿದ್ದು,ಬೆಳಗ್ಗೆ ಮಗ‌ ತಿಂಡಿ‌ ತಿಂದು ರೂಮ್ ಒಳಗೆ ಹೋಗಿದ್ದ ನಂತರ ಮಧ್ಯಾಹ್ನ ಊಟಕ್ಕೆ ಕರೆಯಲು ಹೋದಾಗ ಎಷ್ಟೇ ಬಾಗಿಲು ಬಡಿದರು ಮಗ ಬಾಗಿಲು ತೆಗೆಯದೆ ಇದ್ದ ಕಾರಣ ಅಕ್ಕಪಕ್ಕದವರನ್ನು ಕರೆಸಿ ಬಾಗಿಲು ಒಡೆದಾಗ ಪ್ರೀತಂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಈ ವಿಚಾರವಾಗಿ ತಾಯಿ ರತ್ನ ಮಗ ಹಗಲು ರಾತ್ರಿ ಎನ್ನದೆ ಪಬ್ ಜಿ ಆಡುತ್ತಿದ್ದು,ಈಗ ಆಡಲು ಸಾಧ್ಯವಾಗದ ಕಾರಣ ಬೇಸರಗೊಂಡು ಹೀಗೆ‌ ಮಾಡಿಕೊಂಡಿದ್ದಾನೆ ಎಂದು ಹೇಳಿಕೆ‌ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top
<