ಪಬ್‌ ಜಿ ಬ್ಯಾನ್‌ ರೈತರಿಂದ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಪೂಜೆ.

ದೇಶದಲ್ಲಿ ಚೀನಿ ಆಪ್‌ಗಳನ್ನು ಒಂದರ ಹಿಂದೆ ಒಂದರಂತೆ ಬ್ಯಾನ್‌ ಮಾಡುತ್ತಿದ್ದು, ಇದೀಗ ಪಬ್‌ ಜಿ ಅನ್ನು ಬ್ಯಾನ್‌ ಮಾಡುವ ಮೂಲಕ ಪಬ್‌ ಜಿ ಪ್ರಿಯರತಿಗೆ ಮೋದಿ ಸರ್ಕಾರ ಶಾಕ್‌ ನೀಡಿತ್ತು, ಇನ್ನು ಪಬ್‌ ಜಿ ಬ್ಯಾನ್‌ ಆಗುತ್ತಿದ್ದಂತೆ ಅನೇಕರು ಬೇಸರ ಗೊಂಡಿದ್ರೆ, ಹಲವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಇಲ್ಲೊಬ್ಬ ರೈತ ದಂಪತಿ ಮೋದಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರುನ ಆಶಿಹಾಳ ತಾಂಡದ ರೈತ ದಂಪತಿ ಲಕ್ಷ್ಮಣ ನಾಯಕ,ಲಕ್ಷ್ಮೀಬಾಯಿ ಪೂಜೆ ಸಲ್ಲಿಸಿದ್ರು, ದೇಶದಲ್ಲಿ ಪಬ್‌ ಜಿ ಆಟದಿಂದ ದೇಶದಲ್ಲಿ ಯುವಕರು ಹಾಳಾಗುತ್ತಿದ್ದಾರೆ ಜೊತೆಗೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಪಬ್‌ ಜಿ ದೇಶಕ್ಕೆ ಮಾರಕ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ರು. ಇದೀಗ ದೇಶದಲ್ಲಿ ಪಬ್‌ಜಿ ಬ್ಯಾನ್‌ ಮಾಡಿದ್ದು, ಇದರಿಂದಾಗಿ ಸಂತೋಷಗೊಂಡ ಲಕ್ಷ್ಮಣ ನಾಯಕ,ಲಕ್ಷ್ಮೀಬಾಯಿ ದಂಪತಿ ಮೋದಿ ಫೋಟೋಗೆ ಪೂಜೆ ಮಾಡುವ ಮೂಲಕ ಸರ್ಕಾರದ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top