ಪಬ್‌ ಜಿ ಆಡಲು ಮೊಬೈಲ್‌ ಕೊಡಲಿಲ್ಲ ಅಂತಹುಡುಗ ಮಾಡಿದ್ದೇನು ಗೊತ್ತಾ..?

ಪಬ್‌ ಜಿ ಈ ಒಂದು ಗೇಮ್‌ನಿಂದ ಅದಷ್ಟು ಹುಡುಗರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಹುಚ್ಚರ ರೀತಿ ಬೀದಿ ಬೀದಿಯಲ್ಲಿ ಅಲೆದುಕೊಂಡು ನಾನು ಪಬ್‌ಜಿ ಆಡುತ್ತಿದ್ದೇನೆ ಅನ್ನೋ ವಿಡಿಯೋ ಸುದ್ದಿಗಳನ್ನು ನಾವು ನೀವು ನೋಡಿರ್ತಿವಿ ಕೇಳಿರ್ತಿವಿ.. ಆದ್ರೆ ಇಲ್ಲೊಬ್ಬ ಪಬ್‌ ಜಿ ಆಡಲು ಅಕ್ಕನ ಬಳಿ ಮೊಬೈಲ್‌ ಕೇಳಿದ್ದು ಅಕ್ಕ ಮೊಬೈಲ್‌ ನೀಡಲು ನಿರಾಕರಿಸಿದ್ದಕ್ಕೆ ಮನ ನೊಂದ ಯುವಕ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರಿನಲ್ಲಿ ನಡೆದಿದೆ. ಯಶ್ವಂತ್‌ ತನ್ನ ಅಕ್ಕ ಅಖಿಲ ಬಳಿ ಮೊಬೈಲ್‌ ಕೇಳಿದ್ದು, ಅಖಿಲ ಹೆಚ್ಚು ಮೊಬೈಲ್‌ ಉಪಯೋಗಿಸಬಾರದು ಎಂದು ಬುದ್ದಿವಾದ ಹೇಳಿದಕ್ಕೆ ಮನನೊಂದ ಯಶ್ವಂತ್‌ ಮನೆಯಲ್ಲಿ ಹೊಲಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕವನ್ನು ಸೇವಿಸಿದ್ದಾನೆ.

ವಿಷಯ ತಿಳಿದ ಗ್ರಾಮಸ್ಥರು ಯುವಕನನ್ನು ಹತ್ತಿರದ ಆಸ್ಪತ್ರೆ ಕರೆದುಕೊಂಡು ಹೋಗಿದ್ದು, ಮಾರ್ಗಮದ್ಯದಲ್ಲಿ ಯುವಕ ಪ್ರಾಣವನ್ನು ಬಿಟ್ಟಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top