ಪಬ್‌ಜಿ ಆಡಲು ಇಂಟರ್‌ನೆಟ್‌ ಹಾಕಿಸಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ಪಬ್‌ ಜಿ ಬ್ಯಾನ್‌ ಆಗಿದ್ದರು, ಪಬ್‌ ಜಿ ಹುಚ್ಚು ಮಾತ್ರ ಯುವಕರಿಂದ ಹೊರ ಹೋಗಿಲ್ಲ, ಇನ್ನು ಪಬ್‌ಜಿ ಯಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯು ಕಡಿಮೆಯಾಗಿಲ್ಲ.ಪಬ್‌ ಜಿ ಆಡಲು ಇಂಟರ್‌ನೆಟ್‌ ಖಾಲಿಯಾಗಿದ್ದು, ಇಂಟರ್‌ನೆಟ್‌ ಹಾಕಿಸಿಲ್ಲ ಎಂದು ಈಗತಾನೇ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ತೇಜಸ್‌ ಸಿಡ್ಲಾಪುರ ಎಂಬ ಯುವಕ ಆಗಸ್ಟ್‌ 31ರಂದು ವಿಷ ಸೇವಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾನೆ.

ಈ ಘಟನೆ ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದಲ್ಲಿ ನಡೆದಿದ್ದು, ಮೊಬೈಲ್‌ ಇಂಟರ್‌ನೆಟ್‌ ಖಾಲಿ ಆಗಿದ್ದು ಇಂಟರ್‌ನೆಟ್‌ ಹಾಕಿಸಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡು ಪಬ್‌ಜಿ ಆಟಕ್ಕೆ ಬಲಿಯಾಗಿದ್ದಾನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top