ಪತ್ನಿಗೆ ಈರುಳ್ಳಿ ಕಿವಿ ಓಲೆ ಗಿಫ್ಟ್‌ ಮಾಡಿದ ನಟ ಅಕ್ಷಯ್‌ ಕುಮಾರ್‌..!

ಇತ್ತೀಚೆಗೆ ಈರುಳ್ಳಿ ಬಾರಿ ಸುದ್ದಿಯಲ್ಲಿದೆ. ಒಂದು ಕಡೆ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದರ ಸುದ್ದಿಯಾದ್ರೆ ಇನ್ನೊಂದು ಕಡೆ ಈರುಳ್ಳಿಯ ವಿಚಾರವನ್ನು ಇಟ್ಟುಕೊಂಡು ಟ್ರೋಲ್‌ ಮಾಡೋದು ಮತ್ತು ಟಿಕ್‌ಟಾಕ್‌ ಮಾಡೋದು ಸಹ ದೊಡ್ಡ ವೈರಲ್‌ ಆಗಿದೆ, ಈಗ ಮತ್ತೆ ಈರುಳ್ಳಿ ಸುದ್ದಿಯಾಗಿದೆ. ಆದು ಬಾಲಿವುಡ್‌ ಅಂಗಳದಲ್ಲಿ ಹೌದು ಈ ಬಾರಿ ಸುದ್ದಿಯಾಗಿರೋದು ಈರುಳ್ಳಿ ಕಿವಿ ಓಲೆ ಆಗುವ ಮೂಲಕ, ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ತನ್ನ ಪತ್ನಿ ಟ್ವಿಂಕಲ್‌ ಖನ್ನಾಗೆ ಈರುಳ್ಳಿ ಕಿವಿ ಓಲೆ ಕೊಡುವುದರ ಮೂಲಕ ಈಗ ಈರಳ್ಳಿ ಮತ್ತೆ ಸುದ್ದಿಯಾಗಿದೆ. ಸದ್ಯ ಅಕ್ಷಯ್‌ ಕುಮಾರ್‌ ʻಗುಡ್‌ ನ್ಯೂಸ್‌ʼ ಚಿತ್ರ ಪ್ರಮೋಷನ್‌ನಲ್ಲಿ ಬ್ಯೂಸಿಯಾಗಿದ್ದು. ಈ ಸಲುವಾಗಿ ಕಪಿಲ್‌ ಶರ್ಮಾ ಶೋನಲ್ಲಿ ಭಾಗವಹಿಸಿದ್ರು. ಆ ಕಾರ್ಯಕ್ರಮಕ್ಕೆ ಕರೀನಾ ಕಪೂರ್‌ ಕೂಡ ಬಂದಿದ್ದು ಮೊದಲು ಅಕ್ಷಯ್‌ ಕರೀನಾಗೆ ಈರುಳ್ಳಿಯ ಕಿವಿ ಓಲೆಯನ್ನು ನೀಡಿದ್ದಾರೆ ಆದ್ರೆ ಕರೀನಾ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಆ ಕಿವಿ ಓಲೆಯನ್ನು ತನ್ನ ಪತ್ನಿ ಟ್ವಿಂಕಲ್‌ಗೆ ನೀಡಿದ್ದು ಇದನ್ನು ಟ್ವಿಂಕಲ್‌ ತನ್ನ ಟ್ವೀಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ ಪತಿ ಕಪಿಲ್‌ ಶರ್ಮಾ ಶೋ ನಿಂದ ಬಂದವರು ಈರುಳ್ಳಿ ಕಿವಿ ಓಲೆಯನ್ನು ತೋರಿಸಿ ನಾನು ಇದನ್ನು ಕರೀನಾಗೆ ತೋರಿಸಿದೆ . ಆದ್ರೆ ಅವರು ಆಕರ್ಷಿತರಾಗಲಿಲ್ಲ. ಇದು ನಿನಗೆ ಇಷ್ಟವಾಗಬಹುದು ಅಂತ ನನಗನಿಸಿತು ಹಾಗಾಗಿ ನಿನಗೆ ನೀಡುತ್ತೇನೆ ಅಂತ ಹೇಳಿದ್ರು. ಕೆಲವು ಬಾರಿ ಚಿಕ್ಕ ಹಾಗೂ ಸಾಧಾರಣಾ ವಸ್ತು ನಮ್ಮ ಮನಸ್ಸು ಗೆಲ್ಲುತ್ತದೆ ಎಂದು ಟ್ವಿಂಕಲ್‌ ಪೋಸ್ಟ್‌ ಮಾಡಿಕೊಂಡಿದ್ದಾರೆ.

ಅದೇನೇ ಇದ್ರು ಸದ್ಯ ಈರುಳ್ಳಿ ಮಾತ್ರ ಖರೀದಿ ಮಾಡಿ ತಿನ್ನಲು ಸಾಧ್ಯವಾಗದ ಪರಿಸ್ಥಿತಿ ಜನಸಾಮಾನ್ಯರಿಗೆ ಸಾಧ್ಯವಾಗಿದ್ರು ಸಹ ಈರುಳ್ಳಿ ಅನ್ನೋ ಒಂದು ವಿಷಯ ಜನರ ಕಣ್ಣಿರು ತರಿಸುವುದರ ಜೊತೆಗೆ ಮುಖದಲ್ಲಿ ನಗುವನ್ನು ಬೀರುತ್ತಿರುವುದಂತು ನಿಜ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top