ಪತ್ನಿಗಾಗಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ ಗಂಡ..!

ಇತ್ತೀಚಿನ ದಿನಗಳಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ ಕುಟುಂಬದಲ್ಲಿ ಯಾರಾದರೂ ಗರ್ಭಿಣಿಯಾದರೆ ಅವರ ಫೋಟೋ ಶೂಟ್ ಮಾಡಿಸೋದು ಹೊಸದೊಂದು ಪದ್ಧತಿ ಶುರುವಾಗಿದೆ, ಆದ್ರೆ ಗಂಡನೇ ತನ್ನ ಪತ್ನಿಗಾಗಿ ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿದ್ದಾನೆ ಅಂದರೆ ನೀವೂ ನಂಬಲೇ ಬೇಕು.

ಹೌದು ಅಮೇರಿಕಾದ ಕೆಂಟುಕಿಯ ನಿವಾಸಿಯಾದ ಜೆರೆಡ್ ತನ್ನ ಪತ್ನಿಗಾಗಿ ಫೋಟೋಶೂಟ್ ಮಾಡಿಸಿಕೊಂಡ‌ ಪತಿ, ಪತ್ನಿ ಕೆಲ್ಸೆ ಬ್ರೂವರ್ ಗರ್ಭಿಣಿಯಾದಾಗ ಆಕೆಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಬೇಕು ಅನ್ನೋ ಮಹದಾಸೆ ಇತ್ತಂತೆ ಆದ್ರೆ ಡಾಕ್ಟರ್ ಸಲಹೆ ಮೇರೆಗೆ ಆಕೆ ಬೆಡ್ ರೆಸ್ಟ್ ಮಾಡಲು ಹೇಳಿದ್ದರು ಆದ್ದರಿಂದ ಕೆಲ್ಸೆಗೆ ಫೋಟೋಶೂಟ್ ಮಾಡಿಸಲು ಆಗಲಿಲ್ಲ ಇದರಿಂದ ಆಕೆ ಬೇಸರ ಕೂಡ ಮಾಡಿಕೊಂಡಿದ್ದಳಂತೆ. ಪತ್ನಿ ಬೇಸರ ಮಾಡಿಕೊಂಡಿದ್ದನ್ನು ನೋಡಿದ್ದ ಪತಿ ಜೆರೆಡ್ ತನ್ನ ಪತ್ನಿಯನ್ನು ಖುಷಿಪಡಿಸಲು ತನ್ನ. ಪತ್ನಿಯ ಸಹೋದರಿ ಸ್ಮಿತಾರ್ ಕೈಯಲ್ಲಿ ಫೋಟೋ ಸೆರೆಹಿಡಿಸಿದ್ದಾನೆ.

ಅಲ್ಲದೇ ಆ ಫೋಟೋಗಳನ್ನು ಕೆಲ್ಸೆಗೆ ತೋರಿಸಿದಾಗ ಆಕೆ ಕಣ್ಣೀರಿಟ್ಟಿದ್ದಳು ಅಂತ ಸಹೋದರಿ ಸ್ಮಿತಾರ್ ಹೇಳಿದ್ದಾಳೆ. ಇನ್ನು ತನ್ನ ಪತಿಯ ಫೋಟೋಗಳನ್ನು ಕೆಲ್ಸೆ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು ಈಗ ಈ ಫೋಟೋ ಸಖತ್ ವೈರಲ್ ಆಗಿದೆ ಅಲ್ಲದೇ ಈ ಕೆಲಸ ಮಾಡಿದ ಪತಿ ಜೆರೆಡ್ ಗೆ ಎಲ್ಲಾ ಕಡೆಯಿಂದ‌ ಪ್ರಸಂಶೆ ವ್ಯಕ್ತವಾಗಿದೆ. ಇನ್ನು ಜೆರೆಡ್ ಮತ್ತು ಕೆಲ್ಸೆಗೆ ಸೆಪ್ಟೆಂಬರ್ 28ರಂದು ಗಂಡು ಮಗುವಾಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರಿಗೂ ಶುಭಾಶಯಗಳ ಮಹಾಪೂರ ಹರಿದು ಬರ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top