ಪಡಿಕಲ್ ಭರ್ಜರಿ ಬ್ಯಾಟಿಂಗ್ ಮುಂಬೈ‌165 ಟಾರ್ಗೆಟ್

IPL 2020ಯ ಇಂದಿನ ಪಂದ್ಯದಲ್ಲಿ ಆರ್ ಸಿ ಬಿ ಮತ್ತು ಮುಂಬೈ ಎದುರಾಗಿದ್ದು ಟಾಸ್ ಸೋತ ಆರ್ ಸಿ ಬಿ‌ ಮೊದಲು ಬ್ಯಾಟಿಂಗ್ ಗೆ ಇಳಿಯಿತು ಇಂದಿನ ಪಂದ್ಯದಲ್ಲಿ ಮೂರು ಬದಲಾವಣೆಯೊಂದಿಗೆ ಆರ್ ಸಿ ಬಿ ಕಣಕ್ಕಿಳಿದಿದ್ದು,ಇಂದು ದೇವದತ್ ಪಡಿಕಲ್ ಜೊತೆ ಫಿಂಚ್ ಸ್ಥಾನದಲ್ಲಿ ಜೊಸೆಫ್ ಫಿಲಿಪೆ ಬ್ಯಾಟಿಂಗ್ ಆರಂಭಿಸಿದ್ದು ಈ ಜೋಡಿ ತಂಡಕ್ಕೆ ಉತ್ತಮ ಓಪನಿಂಗ್ ತಂದು ಕೊಟ್ಟಿದೆ. ಫಿಂಚ್ ಬದಲಿಗೆ ಫಿಲಿಪೆಗೆ ಅವಕಾಶ ನೀಡ ಬೇಕು ಅನ್ನೋ‌ ಮಾತುಗಳು ಕೇಳಿಬಂದಿತ್ತು,ಇನ್ನು ತಂಡದಲ್ಲಿ ಬದಲಾವಣೆ ಮೂಲಕ ಫಿಲಿಪೆಗೆ ಅವಕಾಶ ನೀಡಿದ್ದು ,ಕೊಟ್ಟ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ.ಪಡಿಕಲ್ ಮತ್ತು ಫಿಲಿಪೆ ಜೋಡಿ ಮೊದಲ ಆರು ಓವರ್ ನಲ್ಲಿ 54ರನ್ ಗಳಿಸುವ ಮೂಲಕ ಉತ್ತಮ ಆರಂಭ ತಂದುಕೊಟ್ರು,
71 ರನ್ ಗಳ ಜೊತೆಯಾಟ ನೀಡೋ‌ ಮೂಲಕ 33ರನ್ ಗಳಿಸಿ ಫಿಲಿಪೆ ಔಟ್ ಆದ್ರೂ,
ನಂತರ ಬಂದ ನಾಯಕ ವಿರಾಟ್ ಪಡಿಕಲ್ ಜೊತೆಗೂಡಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾದ್ರೂ ಕೇವಲ 9ರನ್ ಗಳಿಸಿ ಬಮ್ರಾಗೆ ವಿಕೆಟ್ ಒಪ್ಪಿಸೋ ಮೂಲಕ ಬಹುಬೇಗನೇ ಪೆವಿಲಿಯನ್ ಸೇರಿದ್ರು
ಇನ್ನು ಪಡಿಕಲ್ ಮತ್ತು ಎಬಿಡಿ ಜೋಡಿ ಬೊಂಬಾಟ್ ಆಟ ಬಂತು ಅನ್ನೋವಾಗಲೇ 15ರನ್ ಗಳಿಸಿ ಔಟ್ ಆದ್ರು,ಇನ್ನು ಉತ್ತಮ ಅರ್ಧ ಶತಕದೊಂದಿಗೆ ತಂಡದ ಬಿಗ್ ಸ್ಕೋರ್ ಗೆ ದೇವದತ್ ಪಡಿಕಲ್ ಆಟವಾಡುತ್ತಿದ್ರೆ ಇತ್ತ ದೇವದತ್ ಗೆ ಸಾಥ್ ನೀಡುವಲ್ಲಿ ಆರ್ ಸಿ ಬಿ ಆಟಗಾರರು ವಿಫಲವಾದ್ರು,
ಇನ್ನು 45 ಬಾಲ್ ಗಳಲ್ಲಿ 74 ರನ್ ಸಿಡಿಸೋ ಮೂಲಕ ಬುಮ್ರಾಗೆ ದೇವದತ್ ಪಡಿಕಲ್ ವಿಕೆಟ್ ಒಪ್ಪಿಸಿದ್ರು. ದೊಡ್ಡ ಮೊತ್ತದತ್ತ ಹೆಜ್ಜೆ ಇಡುತ್ತಿದ್ದ ಆರ್ ಸಿಬಿಗೆ ಬುಮ್ರಾ ದೊಡ್ಡ ಹೊಡೆತ ನೀಡಿದ್ರು,4 ಓವರ್ ನಲ್ಲಿ ಮೂರು ವಿಕೆಟ್ ಪಡೆದ್ರು,ಇನ್ನು ಆರ್ ಸಿ ಬಿ 20 ಓವರ್ ನಲ್ಲಿ ಪಡಿಕಲ್ ಅವರ 74ರನ್ ನೆರವಿನಿಂದ ಕೇವಲ 164 ರನ್ ಗಳಿಸಿ 165 ರನ್ ಗಳ ಟಾರ್ಗೆಟ್ ನೀಡ್ತು

ಇವತ್ತಿನ ಪಂದ್ಯದಲ್ಲಿ ಪಡಿಕಲ್ ಬ್ಯಾಟಿಂಗ್ ಬಗ್ಗೆ ಏನ್ ಹೇಳ್ತೀರಾ,ಆರ್ ಸಿಬಿಯ ಉಳಿದ ಆಟಗಾರರ ಬ್ಯಾಟಿಂಗ್ ಬಗ್ಗೆ ಕಾಮೆಂಟ್ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top