ಪಕ್ಕದ ಮನೆ ಕೋಳಿ ಜಗುಲಿಗೆ ಬಂತು ದೊಣ್ಣೆ ಹಿಡಿದು ಬದಿದಾಡಿಕೊಂಡ ಎರಡು ಕುಟುಂಬ

ಪಕ್ಕದ ಮನೆಯ ಕೋಳಿ ಪದೇ ಪದೇ ಅಂಗಳಕ್ಕೆ ಬರುತ್ತಿದೆ ಎಂದು ಬೈದಿದ್ದಕ್ಕೆ ದೊಣ್ಣೆ ಹಿಡಿದು ಬಡಿದಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಕಾಪು ತಾಲೂಕಿನ ಪಡುಬಿದ್ರೆಯ ಉಳ್ಳೂರು ಬಳಿ ಘಟನೆ ನಡೆದಿದ್ದು, ರವಿರಾಜ್‌ ಶೆಟ್ಟಿ ಎಂಬುವವರು ವಾರಿಜಾ ಶೆಟ್ಟಿ ಎಂಬುವವರ ಮೇಲೆ ಹಲ್ಲೇ ನಡೆಸಿದ್ದಾರೆ. ರವಿರಾಜ್‌ ಅವರ ಮನೆಯ ಕೋಳಿ ಪದೇ ಪದೇ ವಾರಿಜಾ ಅವರ ಮನೆಯ ಅಂಗಳಕ್ಕೆ ಹೋಗಿದ್ದು, ವಾರಿಜಾ ಕೋಳಿಯನ್ನು ಓಡಿಸಿದ್ದಾರೆ.

ಅದು ಮತ್ತೆ ಬಂದಿಕ್ಕೆ ವಾರಿಜಾ ಬೈದಿದ್ದಾರೆ. ಈ ವಿಚಾರ ಗಲಾಟೆಗೆ ತಿರುಗಿದ್ದು, ರವಿರಾಜ್‌ ಶೆಟ್ಟಿ ವರಿಜಾ ಶೆಟ್ಟಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇನ್ನು ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯರ ಮೇಲೂ ರವಿರಾಜ್‌ ಹಲ್ಳೇ ನಡೆಸಿದ್ದಾರೆ.

ಇನ್ನು ಕೋಳಿ ಜಗಳ ಕೇವಲ ನೆಪ ಮಾತ್ರ ಈ ಎರಡು ಕುಟುಂಬದವರ ನಡುವೆ ಹಳೇಯ ಜಮೀನಿನ ತಗಾದೆ ಇತ್ತು ಹಾಗಾಗಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ಎರಡು ಕುಟುಂಬದವರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top