ಪಂಜಾಬ್ ತಂಡಕ್ಕೆ ಬಲಕೊಡಲು ಕ್ರಿಸ್ ಗೇಲ್ ಎಂಟ್ರಿ

ಕಿಂಗ್ಸ್ ಇಲೆವನ್ ಪಂಜಾಬ್ ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರು, ತಂಡ ಗೆಲುವಿನ ದಡ ಸೇರುವಲ್ಲಿ ಮಾತ್ರ ಎಡವುತ್ತಲೇ ಇದೆ. ಈಗಾಗಲೇ ಪಾಯಿಂಟ್ ಟೇಬಲ್‍ನಲ್ಲಿ ಕೊನೆಯ ಸ್ಥಾನದಲ್ಲಿ ಇರೋ ಪಂಜಾಬ್‍ಗೆ ಕೊಲ್ಕತ್ತಾ ತಂಡ ಎದುರಾಗಲಿದೆ. ಈಗಾಗಲೇ ಸೋಲಿನ ಸುಳಿಯಲ್ಲಿರೋ ಪಂಜಾಬ್ ತಂಡ ನಾಳೆಯ ಪಂದ್ಯದಲ್ಲಿ ಗೆಲುವಿನ ಅನಿವಾರ್ಯವಿದ್ದು, ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳೋ ಪ್ರಯತ್ನ ನಡೆಸಲಿದೆ, ಆದ್ರೆ ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್ ಇದ್ದರು ಐದು ಪಂದ್ಯಗಳಿಂದು ಬೆಂಚ್ ಕಾಯುತ್ತಿರುವುದು ಯಾಕೆ ಅನ್ನೋ ಅನುಮಾನಗಳು ಸಹ ಶುರುವಾಗಿದೆ.

ಇನ್ನು ತಂಡದಲ್ಲಿ ಮ್ಯಾಕ್ಸ್‍ವೆಲ್ ಅವಕಾಶ ಗಿಟ್ಟಿಸಿಕೊಂಡ್ರು ಉತ್ತಮ ಪ್ರದರ್ಶನ ನೀಡದೇ ಇರೋದು ಪಂಜಾಬ್ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ರೆ, ಇನ್ನು ಯೂನಿವರ್ಸಲ್ ಬಾಸ್ ಕ್ರಿಸ್‍ಗೇಲ್‍ಗೆ ಅವಕಾಶ ನೀಡದೆ ಇರೋದು ಸಹ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ, ಇನ್ನು ಕ್ರಿಸ್ ಗೇಲ್ ಸನ್‍ರೈಸರ್ಸ್ ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ ಅಂತ ಹೇಳಲಾಗುತ್ತಿತ್ತು, ಆದ್ರೆ ಫುಡ್ ಪಾಯ್ಸನ್ ಆದ ಕಾರಣ ಗೇಲ್ ಕಣಕ್ಕೆ ಇಳಿದಿರಲಿಲ್ಲ, ಇದೀಗ ಗೇಲ್ ಫುಲ್ ಫಿಟ್ ಆಗಿದ್ದು ಕೋಲ್ಕತ್ತಾ ವಿರುದ್ಧದ ಪಂದ್ಯಕ್ಕೆ ಸಖತ್ತಾಗೆ ರೆಡಿಯಾಗಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಗೇಲ್ ಡ್ಯಾನ್ಸ್ ಮಾಡುತ್ತಿರೋ ವಿಡಿಯೋ ಒಂದು ವೈರಲ್ ಆಗಿದ್ದು, ನೆಕ್ಸ್ಟ್ ಮ್ಯಾಚ್‍ಗೆ ಫಿಕ್ಸ್ ಅಂತ ಖುಷಿಯಲ್ಲಿ ಕುಣಿಯುತ್ತಿರೋ ಹಾಗೆ ಇದೆ. ಆ ಮೂಲಕ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ನಾನ್ ರೆಡಿ ಅನ್ನೋ ಹಾಗೆ ಇದ್ದು, ಆ ಮೂಲಕ ಕೆಎಲ್ ರಾಹುಲ್‍ಗೆ ಬಲ ತುಂಬಲು ಗೇಲ್ ರೆಡಿಯಾಗಿದ್ದಾರೆ. ಒಟ್ಟಿನಲ್ಲಿ ಕೋಲ್ಕತ್ತ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯುವ ಮೂಲಕ ರನ್ ಹೊಳೆ ಹರಿಸುತ್ತಾರ ಕಾದುನೋಡ ಬೇಕು. ಕ್ರಿಸ್‍ಗೇಲ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆಡುತ್ತಾರ. ರನ್ ಹೊಳೆ ಹರಿಸುತ್ತಾರಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top