ನ್ಯೂ ಇಯರ್ ಪಾರ್ಟಿ ಬೆಂಗಳೂರಿನಲ್ಲಿ ಕುಡಿದದ್ದು ಎಷ್ಟು ಕೋಟಿಯ ಮದ್ಯ ಗೊತ್ತಾ?

ಹೊಸ ವರ್ಷ ಆಚರಣೆಯಾಗಿ ಎರಡು ದಿನ ಕಳಿಯುತ್ತಾ ಬಂತು,ಇನ್ನು ಅನೇಕರು ಹೊಸ ವರ್ಷದ ಜೋಶ್ ನಲ್ಲೇ ಇದ್ದಾರೆ,ಹೀಗಿರುವಾಗಲೇ ಹೊಸ ವರ್ಷದ ಸಂತೋಷದ ವಿಚಾರ ಒಂದನ್ನು ಕರ್ನಾಟಕ ಅಬಕಾರಿ ಇಲಾಖೆ ಹಂಚಿಕೊಂಡಿದೆ.

ಹೌದು ಹೊಸ ವರ್ಷ ಆಚರಣೆ ಸಲುವಾಗಿ ಡಿಸೆಂಬರ್ 31ರಂದು ಬಾರ್ ಮತ್ತು ಪಬ್,ಮದ್ಯ ಮಾರಾಟ ಮಳಿಗೆಗಳು,ರೆಸ್ಟೋರೆಂಟ್ ಗಳನ್ನು ಕಾರ್ಯ ನಿರ್ವಹಿಸಲು 2ಗಂಟೆ ವರೆಗೂ ಅನುಮತಿ ನೀಡಲಾಗಿತ್ತು.ಈ ಹಿನ್ನಲೆಯಲ್ಲಿ ಬೆಂಗಳೂರು ಒಂದರಲ್ಲೇ ಇದನ್ನು ಸದುಪಯೋಗ ಪಡಿಸಿಕೊಂಡಿರೋ ಗ್ರಾಹಕರು ಮತ್ತು ವರ್ತಕರು ಮದ್ಯ ಮಾರಾಟದಲ್ಲಿ ಹೇರಳವಾಗಿ ಹಣವನ್ನು ವ್ಯಯಮಾಡಿದ್ದು,ಇದರಿಂದಾಗಿ ಅಬಕಾರಿ ಇಲಾಖೆಗೆ ಡಿಸೆಂಬರ್ 31ರಂದು ಬರೋಬ್ಬರಿ 75ಕೋಟಿ ಆದಾಯ ಬಂದಿದ್ಯಂತೆ..ಅಲ್ಲದೇ ಇದು ಕಳೆದ ಬಾರಿಗಿಂತಲೂ ಶೇ6 ರಷ್ಟು ಹೆಚ್ಚಳ ಕಂಡಿದ್ದು,ಇದರಿಂದ ಅಬಕಾರಿ ಇಲಾಖೆಯ ಅದಾಯ ಪ್ರಮಾಣ ಕೂಡ ಹೆಚ್ಚಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top