
ನ್ಯೂ ಇಯರ್ ಪಾರ್ಟಿ ಮಾಡಲು ಅಜ್ಜಿ ಹಣ ಕೊಡಲಿಲ್ಲ ಅಂತ ಮೊಮ್ಮಗನೇ ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ 19 ವರ್ಷದ ಕರಣ್ ಎಂಬ ಯುವಕ 73 ವರ್ಷದ ಅಜ್ಜಿಯ ಬಳಿ ನ್ಯೂ ಇಯರ್ ಪಾರ್ಟಿ ಮಾಡಲು ಹಣವನ್ನು ಕೇಳಿದ್ದಾನೆ. ಆಗ ಅಜ್ಜಿ ಕೊಡಲು ನಿರಾಕರಿಸಿದ್ದಾರೆ, ಈ ವೇಳೆ ಕೋಪಗೊಂಡ ಮೊಮ್ಮಗ ಅಜ್ಜಿಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಅಜ್ಜಿಯ ಬಳಿ ಇದ್ದ 18 ಸಾವಿರ ರೂಪಾಯಿಯನ್ನು ದೋಚಿಕೊಂಡು ಹೋಗಿದ್ದಾನೆ. ಇನ್ನು ಅಜ್ಜಿ ಇಬ್ಬರು ಮಕ್ಕಳಿದ್ದು ಕರಣ ಮೊದಲ ಮಗ ಆಗಿದ್ದು ತಂದೆ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು, ಕರಣ್ ಸಾಕಷ್ಟು ಸಾಲವನ್ನು ಮಾಡಿದ್ದಾನೆ ಎಂದು ತಿಳಿದುಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರೋ ದೆಹಲಿ ಪೊಲೀಸರು ಕರಣ್ನನ್ನು ಬಂಧಿಸಿದ್ದಾರೆ.