ನೀವು ಬೆಳಗಾವಿಯಲ್ಲಿ ಇದ್ದರೆ ಈ ಪ್ರದೇಶಕ್ಕೆ ಹೋಗಿ ಬನ್ನಿ..

ಸದ್ಯ ಜನರು ಕೊರೋನಾ ಹಾವಳಿಯಿಂದ ಬೇಸತ್ತು, ಎಲ್ಲರಿಗೂ ಒಂದು ಸುಂದರ ವಾತಾವರಣದ ಹುಡುಕಾಟದಲ್ಲಿದ್ದಾರೆ. ಒಂದಿಷ್ಟು ಜನ ರಿಲ್ಯಾಕ್ಸ್‌ ಮೂಡ್‌ಗಾಗಿ ಪ್ರವಾಸಿತಾಣಗಳ ಕಡೆ ಹೋಗುವುದಕ್ಕೆ ಶುರುಮಾಡಿಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಪಾತಗಳನ್ನು ನೋಡಲು ಆನಂದ ಅನಿಸುತ್ತಿದೆ.
ಅದೇ ರೀತಿ ಕುಂದಾನಗರಿ ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿರೋ ಚಿಕಲೆ ಫಾಲ್ಸ್‌ ಇದೀಗ ಪ್ರವಾಸಿಗರನ್ನು ತನ್ನ ಕಡೆ ಸೆಳೆದುಕೊಳ್ಳುತ್ತಿದೆ. ಸತತ ಮಳೆಯಿಂದಾಗಿ ಚಿಕಲೆ ಫಾಲ್ಸ್‌ ತುಂಬಿ ಹರಿಯುತ್ತಿದ್ದು,ನೋಡುಗರನ್ನು ಆಕರ್ಷಿಸುತ್ತಿದೆ. ಇದೀಗ ಚಿಕಲೆ ಚೆಲುವನ್ನು ನೋಡಲು ಮನೆ ಮಂದಿಯಲ್ಲೇ ಜಲಪಾತದ ಕಡೆ ಮುಖ ಮಾಡಿದ್ದಾರೆ.

ಬೆಳಗಾವಿಯಿಂದ 41 ಕಿಲೋ ಮೀಟರ್‌ ದೂರದಲ್ಲಿ ಇರೋ ಚಿಕಲೆ ಗ್ರಾಮದಿಂದ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋದರೆ ಚಿಕಲೆ ಜಲಪಾತ ಸಿಗಲಿದ್ದು , ಬೆಟ್ಟದ ಮೇಲಿಂದ ಹರಿದು ಬರುವ ಚಿಕಲೆ ಜಲಪಾತವಾಗಿ ಕಣ್ಣಿಗೆ ಆನಂದವನ್ನು ನೀಡುತ್ತದೆ.

ಇನ್ನು ಇಲ್ಲಿಗೆ ಬರುವ ಪ್ರವಾಸಿಗರು ಜಲಾಪತವನ್ನು ನೋಡಿ ಆನಂದ ಪಡುತ್ತಿದ್ದು, ಈ ಪ್ರದೇಶದಲ್ಲಿ ಒಂದಿಷ್ಟು ಸೇಪ್ಟಿಯನ್ನು ಮಾಡಿದರೆ ಇನ್ನು ಅದ್ಭುತ ಎಂದು ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top