ನೀವು ನಮ್ಮ ಸೀನಿಯರ್‌ ಅನ್ನೋದೆ ಹೆಮ್ಮೆ!

ದರ್ಶನ್‌ ನೀವು ನನ್ನ ಅಣ್ಣಾ ಅನ್ನೋದೆ ಸೌಭಾಗ್ಯ, ನೀವು ನಮ್ಮ ಸೀನಿಯರ್‌ ಅನ್ನೋದೆ ನನ್ನ ಹೆಮ್ಮೆ ಅಂತ ಅಭಿಷೇಕ್‌ ಅಂಬರೀಷ್‌ ಇನ್ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಬಗ್ಗೆ ಹಾಡಿ ಹೊಗಳಿದ್ದಾರೆ. ದರ್ಶನ್‌ ಮತ್ತು ಅಭಿಷೇಕ್‌ ಅಂಬರೀಷ್‌ ಸ್ಯಾಂಡಲ್‌ವುಡ್‌ನ ಅಣ್ಣ ತಮ್ಮ , ದರ್ಶನ್‌ ಕೊಟ್ಟ ಸಲಹೆಯಂತೆ ನಡೆದುಕೊಳ್ಳುತ್ತಾರೆ ಅಭಿಷೇಕ್‌ ಅಂಬರೀಷ್‌, ಇನ್ನು ಅಂಬಿ ಕುಟುಂಬದ ಮೇಲೆ ಅಪಾರ ಗೌರವ ಇರುವ ದರ್ಶನ್‌ ಕೂಡ ಅಂಬಿಯವರನ್ನ ಅಪ್ಪಾಜಿ ಅಂತಾನೇ ಕರೆಯುತ್ತಿದ್ದದ್ದು, ಹೀಗಿರುವಾಗ ದರ್ಶನ್‌ ಚಿತ್ರರಂಗಕ್ಕೆ ಬಂದು ೨೩ ವರ್ಷವಾದ ಹಿನ್ನೆಲೆಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ #23yearsofbossism ಹ್ಯಾಷ್‌ ಟ್ಯಾಗ್‌ ಬಳಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಇದೀಗ ಹ್ಯಾಷ್‌ ಟ್ಯಾಗ್‌ ಬಳಸಿ ಅಭಿಷೇಕ್‌ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಬಗ್ಗೆ ಹೊಗಳಿದ್ದಾರೆ. ʻನಿಮ್ಮನ್ನು ಅಣ್ಣನಾಗಿ ಪಡೆದಿದ್ದು ನನ್ನ ಸೌಭಾಗ್ಯ, ನೀವು ಚಿತ್ರರಂಗದಲ್ಲಿ 23 ವರ್ಷ ಮಾಡಿರೋ ಸಾಧನೆ ನಮಗೆ ಹೆಮ್ಮೆ ಅನಿಸುತ್ತದೆ, ನೀವೂ ನನ್ನ ಸೀನಿಯರ್‌ ಅನ್ನೋದೆ ನನಗೆ ಖುಷಿ ಅಂತ ಬರೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರೆಟಿಗಳು ಸಹ #23yearsofbossism ಹ್ಯಾಷ್‌ ಟ್ಯಾಗ್‌ ಬಳಸಿ ದರ್ಶನ್‌ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top