ನಿವೃತ್ತಿ ಬಳಿಕ ಕಪ್ಪು ಕೋಳಿ ಸಾಕೋಕೆ ಹೊರಟ ಎಂ ಎಸ್‌ ಧೋನಿ..

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದು, ಇದೀಗ ಧೋನಿ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಈಗಾಗಲೇ ಧೋನಿ ಸಾವಾಯುವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು,ಇದೀಗ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ʻಕಟಕ್‌ನಾಥ್‌ ಕೋಳಿ ಎಂದು ಕರೆಯುವ ಈ ಕಪ್ಪು ಕೋಳಿಯ ಸಾಕಾಣಿಕೆಗಾಗಿ ಧೋನಿ ತಮ್ಮ ಸಾವಾಯುವ ಕೃಷಿ ತಂಡವನ್ನು ಮಧ್ಯಪ್ರದೇಶದ ಜಬುವಾ ಜಿಲ್ಲೆಗೆ ಕಳುಹಿಸಿ ಮಾಹಿತಿ ಪಡೆಯುವ ಜೊತೆಯಲ್ಲಿ 2 ಸಾವಿರ ಕಟಕ್‌ನಾಥ್‌ ಕೋಳಿ ಮರಿಗಳನ್ನು ಆರ್ಡರ್‌ ಮಾಡಿದ್ದರಂತೆ.

ಜಬುವಾ ಜಿಲ್ಲೆಯ ರೈತರಾದ ವಿನೋದ್‌ ಮೇಧಾ ಅವರ ಬಳಿ ೨ ಸಾವಿರ ಕಟಕ್‌ನಾಥ್‌ ಕೋಳಿಯನ್ನು ಆರ್ಡರ್‌ ಮಾಡಿದ್ದು ಡಿಸೆಂಬರ್‌ 15ರ ವೇಳೆಗೆ ಪೂರೈಸುವಂತೆ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರೋ ರೈತ ವಿನೋದ್‌ ಮೇಧಾ 2 ಸಾವಿರ ಕೋಳಿ ಮರಿಗಳನ್ನು ಪೂರೈಸಲು ಆರ್ಡರ್‌ ಬಂದಿದೆ. ಒಬ್ಬ ಖ್ಯಾತ ವ್ಯಕ್ತಿಗೆ ಇದನ್ನು ಪೂರೈಸುತ್ತಿದ್ದೇವೆ ಅನ್ನೋ ಹೆಮ್ಮೆ ನಮಗೆ ಆಗುತ್ತಿದೆ ಎಂದು ಹೇಳಿದ್ದಾರೆ.

ಸದ್ಯ ನಿವೃತ್ತಿ ನಂತರ ಧೋನಿ ತಮ್ಮ ಜಮೀನಿನಲ್ಲಿ 43 ಎಕರೆ ಪ್ರದೇಶದಲ್ಲಿ ಸಾವಯುವ ಕೃಷಿಯನ್ನು ಮಾಡುತ್ತಿದ್ದಾರೆ.

ಇನ್ನು ಈ ಕಟಕ್‌ನಾಥ್‌ ಕೋಳಿ ಮಧ್ಯಪ್ರದೇಶದ ಬುಡಕಟ್ಟು ಮೂಲದ ಕೋಳಿಯಾಗಿದ್ದು, ಈ ಕೋಳಿಯ ಮಾಂಸ ಮತ್ತು ಮೊಟ್ಟೆಗೆ ದೇಶಾದ್ಯಂತ ಹೆಚ್ಚು ಬೇಡಿಕೆ ಇದೆ. ಈ ಕೋಳಿಯನ್ನು ಹೆಚ್ಚು ಕೊಬ್ಬಿನ ಅಂತ ಇರೋದಿಲ್ಲ ಮತ್ತು ಇದು ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆ ಇರೋರಿಗೆ ಉತ್ತಮವಾದ ಆಹಾರವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top