ನಿರ್ದೇಶನದಿಂದ ನಿರ್ಮಾಣದ ಕಡೆ ಮುಖ ಮಾಡಿದ ಪ್ರಶಾಂತ್‌ ನೀಲ್‌..!

ಕೆಜಿಎಫ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಇಡೀ ಇಂಡಿಯಾನೇ ನೋಡುವ ರೀತಿ ಮಾಡಿದ ಡೈರೆಕ್ಟರ್‌ ಪ್ರಶಾಂತ್‌ ನೀಲ್‌, ಸದ್ಯ ಕೆಜಿಎಫ್‌ 2 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಕೆಜಿಎಫ್‌ ಸಿನಿಮಾ ಇಂಡಿಯಾದ ಮಾಸ್ಟರ್‌ ಸಿನಿಮಾವಾಗಿ ಮಾಡಿದ ಪ್ರಶಾಂತ್‌ ನೀಲ್‌, ಕೆಜಿಎಫ್‌ ಚಾಪ್ಟರ್‌2 ಚಿತ್ರವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಲು ರೆಡಿಯಾಗಿದ್ದಾರೆ. ಈ ನಡುವೆ ಪ್ರಶಾಂತ್‌ ಹೊಸದೊಂದು ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಪ್ರಶಾಂತ್‌ ನೀಲ್‌ ನಿರ್ದೇಶನದ ಜೊತೆ ಜೊತೆಯಲ್ಲಿ ನಿರ್ಮಾಣದ ಕಡೆಯು ಮುಖ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಸಿನಿಮಾಗೆ ಬಂಡವಾಳ ಹಾಕಲು ನಿರ್ಧರಿಸಿದ್ದಾರೆ. ಶ್ರೀಮುರುಳಿಯ ಮುಂದಿನ ಸಿನಿಮಾಗೆ ಪ್ರಶಾಂತ್‌ ನೀಲ್‌ ಬಂಡವಾಳ ಹೂಡಲಿದ್ದಾರಂತೆ.

ಆ ಮೂಲಕ ನಿರ್ಮಾಪಕರಾಗಿಯೂ ಪ್ರಶಾಂತ್‌ ನೀಲ್‌ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಈ ಮೊದಲು ಪ್ರಶಾಂತ್‌ ನೀಲ್‌ ಪ್ರಥಮ ಬಾರಿಗೆ ಶ್ರೀಮುರುಳಿಗೆ ಡೈರೆಕ್ಷನ್‌ ಹೇಳುವ ಮೂಲಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದು, ಈಗ ಶ್ರೀಮುರುಳಿಗೆ ಬಂಡವಾಳ ಹೂಡುವ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕೂ ಕೈ ಹಾಕಲಿದ್ದಾರೆ. ನಟ ಶ್ರೀ ಮುರುಳಿ ಹುಟ್ಟಿದ ಹಬ್ಬ ಡಿಸೆಂಬರ್‌ 17ರಂದು ಇದ್ದು, ಅಂದೇ ಹೊಸ ಸಿನಿಮಾ ಅನೌನ್ಸ್‌ ಮಾಡಲಿದ್ದಾರೆ. ಇನ್ನು ಈ ಚಿತ್ರಕ್ಕೆ ಸದ್ಯ ಹೆಸರು ಫೈನಲ್‌ ಆಗಿಲ್ಲ, ಅಲ್ಲದೇ ನಿರ್ಮಾಣದ ಜವಬ್ದಾರಿ ಪ್ರಶಾಂತ್‌ ನೀಲ್‌ ವಹಿಸಿಕೊಂಡಿದ್ರೆ, ಇತ್ತ ಡಾ.ಸೂರಿ ಚಿತ್ರಕ್ಕೆ ಡೈರೆಕ್ಷನ್‌ ಹೇಳಲಿದ್ದಾರೆ. ಈ ಹಿಂದೆ ಡಾ.ಸೂರಿ ಯಶ್‌ ಮತ್ತು ರಮ್ಯಾ ಕಾಂಬೀನೇಷನ್‌ನ ಲಕ್ಕಿ ಸಿನಿಮಾದ ಮೂಲಕ ಡೈರೆಕ್ಷರ್‌ ಕ್ಯಾಪ್‌ ತೊಟ್ಟಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top