ನಿರೂಪಕರಾಗಲು ರೆಡಿಯಾದ ಮಾಜಿ ಸಚಿವೆ ಉಮಾಶ್ರೀ..!

ಸ್ಯಾಂಡಲ್‌ವುಡ್‌ನ ಪುಟ್ಮಲ್ಲಿ ಉಮಾಶ್ರೀಯವರು ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಬಣ್ಣದ ಲೋಕಕ್ಕೆ ಸ್ವಲ್ಪ ಬಿಡುವು ನೀಡಿದ್ರು, ರಾಜಕೀಯದಲ್ಲಿ ಸಚಿವರಾಗಿ ತಮ್ಮದೇ ಕೆಲಸಗಳನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದ ಉಮಾಶ್ರೀ ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಸದ್ಯ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ʻಆರತಿಗೊಬ್ಬ ಕೀರ್ತಿಗೊಬ್ಬʼಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಸದ್ಯದರಲ್ಲಿಯೇ ಉಮಾಶ್ರೀ ನಿರೂಪಕರಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಹೌದು ಉದಯ ಟಿವಿಯಲ್ಲಿ ಇನ್ನೇನು ಶುರುವಾಗಲಿರೋ ʻಚಿಣ್ಣರ ಚಿಲಿಪಿಲಿʼ ಮಕ್ಕಳ ಶೋಗೆ ಉಮಾಶ್ರೀ ನಿರೂಪಣೆ ಮಾಡಲಿದ್ದಾರೆ. ಈ ಹಿಂದೆ ಈ ಕಾರ್ಯಕ್ರಮವನ್ನು ಪಾಪ ಪಾಂಡು ಖ್ಯಾತಿಯ ಶಾಲಿನಿ ನಡೆಸಿಕೊಡುತ್ತಿದ್ದರು.
ಸದ್ಯ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕಕ್ಕೆ ಮರಳಿರುವ ಉಮಾಶ್ರೀ, ಇದೀಗ ರಿಯಾಲಿಟಿ ಶೋ ಮೂಲಕ ನಿರೂಪಕರಾಗಿ ಪ್ರೇಕ್ಷಕರನ್ನು ಗಮನ ಸೆಳೆಯಲು ಮುಂದಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top