ನಿಮ್ಮನ್ನ ಮಿಸ್‌ ಮಾಡಿಕೊಳ್ತೀವಿ, ಈ ಸಲ ಕಪ್‌ ತಗೋಂಡೆ ಬರೋದು – ABD

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ಕಾಣ್ತಾ ಇದ್ದು, ಈಗಾಗಲೇ ಪ್ಲೇ ಆಫ್‌ ಹಂತವನ್ನು ಸುಗಮ ಮಾಡಿಕೊಳ್ಳುವ ಮೂಲಕ ಈ ಬಾರಿ ಕಪ್‌ ಗೆಲ್ಲುವ ವಿಶ್ವಾದಲ್ಲಿದ್ದಾರೆ. ತಂಡದಲ್ಲಿ ವಿರಾಟ್‌ ಕೊಹ್ಲಿ, ಆರ್‌ಸಿಬಿ ಆಪತ್ಭಾಂಧವ ಎಬಿಡಿ ವಿಲಿಯರ್ಸ್‌ ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ಇನ್ನಷ್ಟು ಬಲತಂದುಕೊಟ್ಟಿದೆ. ಇನ್ನು ಇತ್ತ ಬೌಲಿಂಗ್‌ ವಿಭಾಗದಲ್ಲಿ ಕ್ರಿಸ್‌ ಮಾರಿಸ್‌ ಎಂಟ್ರಿ ತಂಡಕ್ಕೆ ಇನ್ನಷ್ಟು ಶಕ್ತಿ ನೀಡಿದ್ದು, ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲೋದು ಪಕ್ಕಾ ಅಂತ ಟೀಂ ವಿಶ್ವಾಸದಲ್ಲಿದ್ರೆ ಇತ್ತ ಅಭಿಮಾನಿಗಳು ಸಹ ಅದೇ ಖುಷಿಯಲ್ಲಿ ಇದ್ದಾರೆ.

ಹೀಗಿರುವಾಗಲೇ ಆರ್‌ಸಿಬಿಯ ಅಪತ್ಭಾಂಧವ ಎಬಿ ಡಿವಿಲಿಯರ್ಸ್‌ ಹೇಳಿದ ಆ ಒಂದು ಮಾತು ಇದೀಗ ಆರ್‌ಸಿಬಿ ಅಭಿಮಾನಿಗಳಲ್ಲಿ ಜೋಶ್‌ ನೀಡಿದೆ. ನಿನ್ನೆ ಆರ್‌ಸಿಬಿಯ ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ ಬಂದಿದ್ದ ಎಬಿ ಡಿ ವಿಲಿಯರ್ಸ್‌ ಪಂದ್ಯದಲ್ಲಿ ಯಾವ ರೀತಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅನ್ನುವುದನ್ನು ಹೇಳುವುದರ ಜೊತೆಯಲ್ಲಿ ಈ ಬಾರಿ ಕಪ್‌ ಗೆದ್ದುಕೊಂಡು ಬೆಂಗಳೂರಿಗೆ ಬರ್ತೀವಿ ಅಂತ ಹೇಳಿದ್ದಾರೆ. ಈ ಬಾರಿ ಐಪಿಎಲ್‌ ವೀಕ್ಷಿಸಲು ಸ್ಟೇಡಿಯಂ ಪ್ರೇಕ್ಷಕರಿಗೆ ಅವಕಾಶವಿಲ್ಲದಿರುವುದರಿಂದ ಎಬಿಡಿ ನಿಮ್ಮನ್ನು ನಾವು ಸಖತ್‌ ಮಿಸ್‌ ಮಾಡಿಕೊಳ್ತೀವಿ, ಆ ನೀವೂ ಸಪೋರ್ಟ್‌ನ ಫೀಲ್‌ ಮಾಡ ಬಹುದು, ಈ ಬಾರಿ ನಾವು ಕಪ್‌ ಗೆದ್ದುಕೊಂಡೇ ಬರ್ತೀವಿ ಅಂತ ಹೇಳಿದ್ದಾರೆ.

ಎಬಿಡಿಯವರ ಈ ಮಾತು ಕೇಳಿದ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದು, ಆರ್‌ಸಿಬಿ ಉತ್ತಮ ಪ್ರದರ್ಶನ ನೀಡ್ತಾ ಇದ್ದು ಎಬಿಡಿ ಹೇಳಿದಂತೆ ಈ ಬಾರಿ ಕಪ್‌ ಗೆದ್ದುಕೊಂಡೇ ಬರ್ತಾರೆ ಅಂತ ಆರ್‌ಸಿಬಿ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಇನ್ನು ಈ ಬಾರಿ ಆರ್‌ಸಿಬಿ ಈ ಸಲ ಕಪ್‌ ನಮ್ದೆ ಅನ್ನೋದನ್ನ ಹೇಳದೆ ಈ ಸಲ ಕಪ್‌ ತಮ್ಮದಾಗಿಸಿಕೊಂಡು ಬರ್ತಾರೆ ಅನ್ನೋ ಮಾತುಗಳನ್ನು ಕ್ರಿಕೆಟ್‌ ಪ್ರಿಯರು ಹೇಳ್ತಿದ್ದಾರೆ.

ಎಬಿಡಿ ಹೇಳಿದ ರೀತಿ ನೀವೂ ಕೂಡ ಆರ್‌ಸಿಬಿ ಮ್ಯಾಚ್‌ ಅನ್ನ ಸ್ಟೇಡಿಯಂನಲ್ಲಿ ನೋಡದನ್ನ ಮಿಸ್‌ ಮಾಡಿಕೊಳ್ತಿದ್ದೀರಾ.. ಈ ಸಲ ಕಪ್‌ ಗೆಲ್ಲೋದು ಪಕ್ಕಾನ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top