ನಿಮಗಾಗಿ ಕ್ರಿಸ್ ಗೇಲ್ ಕಳುಹಿಸಿದ್ರು ಒಂದು ಮೆಸೇಜ್

ಕ್ರಿಕೆಟ್ ಜಗತ್ತಿನ ದೈತ್ಯ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಖಡಕ್ ಮೆಸೇಜ್ ಒಂದನ್ನು ನೀಡಿದ್ದಾರೆ.ಹೌದು ಕ್ರಿಕೆಟ್ ಜಗತ್ತಿಗೆ ಕ್ರಿಸ್ ಗೇಲ್ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಜೋರಾಗೆ ನಡೀತಾ ಇತ್ತು, ಅದರಲ್ಲೂ ಐಪಿಎಲ್ ವೇಳೆಯಲ್ಲಿ ಇದು ಕ್ರಿಸ್ ಗೇಲ್ ಅವರ ಕೊನೆಯ ಐಪಿಎಲ್ ಅಂತಾನೇ ಎಲ್ಲಾರೂ ಹೇಳ್ತಾ ಇದ್ರು, ಇದೀಗ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಮೆಸೇಜ್ ಒಂದನ್ನು ಹೇಳಿದ್ದಾರೆ. ನಾನೂ ಇನ್ನು ನಿವೃತ್ತಿಯ ಬಗ್ಗೆ ಯೋಚಿಸಿಲ್ಲ, 2021ರ ವಿಶ್ವಕಪ್ ಅಷ್ಟೇ ಅಲ್ಲ 2022ರ ವಿಶ್ವಕಪ್ ಅನ್ನು ನಾನು ಆಡುತ್ತೇನೆ, ನಾನು 45 ವರ್ಷ ವಯಸ್ಸಿಗೂ ಮುಂಚೆ ನಿವೃತ್ತಿಯನ್ನು ಹೇಳುವುದಿಲ್ಲ ಅನ್ನೋ ಮಾತುಗಳನ್ನು ಹೇಳಿದ್ದಾರೆ. ದುಬೈನಲ್ಲಿ ನಡೀತಾ ಇರೋ ಅಲ್ಟಿಮೇಟ್ ಕ್ರಿಕೆಟ್ ಚಾಲೆಂಜ್ ಟೂರ್ನಿಯ ವೇಳೆ ಮಾತನಾಡಿರೋ ಅವರು ನಾನು ಇನ್ನೂ 5 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇರಲು ಬಯಸುತ್ತೇನೆ ಅಂತ ಹೇಳಿದ್ದಾರೆ. ನಾನು ಇನ್ನು ಎರಡು ವಿಶ್ವಕಪ್‍ಗಳನ್ನು ಆಡಲಿದ್ದೇನೆ ಅಂತ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೇಳಿದ್ದಾರೆ.

ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇದೀಗ ಟೀಂ ಇಂಡಿಯಾದಲ್ಲಿ ಬದಲಾವಣೆಯಾಗಿದೆ. ಹೌದು ತಂಡದಲ್ಲಿ ಉಪನಾಯಕ ಸ್ಥಾನದಲ್ಲಿ ಬದಲಾವಣೆಯಾಗಿದ್ದು, ಹಿಟ್‍ಮ್ಯಾನ್ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಆಸ್ಟ್ರೇಲಿಯಾ ಪ್ರವಾಸ ಹೋಗಿದ್ದು, ಈಗಾಗಲೇ 14 ದಿನಗಳ ಕ್ವಾರಂಟೈನ್ ಮುಗಿಸಿ ಟೀಂ ಇಂಡಿಯಾ ಕ್ಯಾಂಪ್ ಸೇರಿಕೊಂಡಿದ್ದಾರೆ. ಇನ್ನು ಮುಂದಿನ ಮೂರು ಮತ್ತ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯಲ್ಲಿದ್ದು ಇದೀಗ ರೋಹಿತ್ ಶರ್ಮಾಗೆ ಹೊಸ ಜಬ್ದಾರಿಯನ್ನು ನೀಡಲಾಗಿದೆ. ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ಚೇತೇಶ್ವರ ಪೂಜಾರ ಉಪನಾಯಕ ಸ್ಥಾನವನ್ನು ಅಲಂಕರಿಸಿದ್ರು, ಇದೀಗ ಮೂರು ಮತ್ತು ನಾಲ್ಕನೇ ಟೆಸ್ಟ್‍ಗೆ ರೋಹಿತ್ ಶರ್ಮಾ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದೆ ಬಿಸಿಸಿಐ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್‍ಗೆ ಪಾದಾರ್ಪಣೆ ಮಾಡಲಿದ್ದಾರಾ ಅನ್ನೋ ಪ್ರಶ್ನೆ ಉದ್ಭವಾಗಿದೆ. ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದ ಉಮೇಶ್ ಯಾದವ್ ಬದಲಿಗೆ ಇದೀಗ ನಟರಾಜನ್ ಅವರಿಗೆ ಟೀಂ ಇಂಡಿಯಾದಲ್ಲಿ ಬಿಸಿಸಿಐ ಸ್ಥಾನ ಕಲ್ಪಿಸಿಕೊಟ್ಟಿದ್ದು, ಆ ಮೂಲಕ ಮೂರನೇ ಟೆಸ್ಟ್‍ನಲ್ಲಿ ನಟರಾಜನ್ ಪಾದಾರ್ಪಣೆ ಮಾಡಲಿದ್ದಾರ ಅನ್ನೋ ಕುತೂಹಲ ಇದೀಗ ಕ್ರಿಕೆಟ್ ಪ್ರಿಯರಲ್ಲಿ ಮನೆಮಾಡಿದೆ. ಇನ್ನು ಇತ್ತ ಮೊಹಮ್ಮದ್ ಶಮಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರೋ ಶಾರ್ದೂಲ್ ಠಾಕೂರ್ ಕೂಡ ಪಾದಾರ್ಪಣೆ ಮಾಡುವ ತವಕದಲ್ಲಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಕಾದುನೋಡಬೇಕು, ಒಂದು ಲೆಕ್ಕಾಚಾರದ ಪ್ರಕಾರ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರೋ ಶಾರ್ದೂಲ್ ಠಾಕೂರ್ ಅವಕಾಶ ಸಿಗೋದು ಹೆಚ್ಚು ಅಂತಾನೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಟಿ ನಟರಾಜನ್‍ಗೆ ಮಾತ್ರ ಮೂರು ಮಾದರಿಯಲ್ಲೂ ಇಂಜುರಿ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನ ಲಭಿಸುತ್ತಿದ್ದು, ಈಗಾಗಲೇ ಟಿ 20 ಮತ್ತು ಏಕದಿನ ಪಂದ್ಯದಲ್ಲಿ ತಮ್ಮ ಸಾಮಥ್ರ್ಯವನ್ನು ಸಾಭೀತು ಪಡಿಸಿದ್ದಾರೆ. ಹಾಗಾದ್ರೆ ಟೆಸ್ಟ್ ಪಂದ್ಯದಲ್ಲೂ ನಟರಾಜನ್‍ಗೆ 11ರ ಬಳಗದಲ್ಲಿ ಅವಕಾಶ ಸಿಗಲಿದ್ಯಾ ಕಾದುನೋಡಬೇಕು.

ನಿಮ್ಮ ಪ್ರಕಾರ ಮೂರನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ನಟರಾಜನ್ ಇವರಿಬ್ಬರಲ್ಲಿ ಯಾರಿಗೆ ಅವಕಾಶ ಸಿಗಬಹುದು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top