ನಿನ್ನ ಮೂಗು ದಪ್ಪ ಇದೆ.. ಎಂದು ಮದುವೆ ಬೇಡವೆಂದ ಹುಡುಗಿ..!

ಮದುವೆ ಅದೆಷ್ಟೋ ಬಾರಿ ಎಂತಂತದ್ದೋ ವಿಚಾರಗಳಿಗೆ ಮುರಿದು ಬಿದ್ದಿರುವುದನ್ನು ನಾವು ಕೇಳಿರ್ತೇವೆ, ಕೆಲವೊಮ್ಮ ಮದುವೆ ಮನೆಯಲ್ಲಿ ಊಟ ಸರಿ ಇಲ್ಲ ಎಂದು, ಹೆಣ್ಣಿನವರು ಗಂಡಿನ ಕಡೆಯವರಿಗೆ ಮರ್ಯಾದೆ ಕೊಡಲಿಲ್ಲವೆಂದು ಹೀಗೆ ಅನೇಕ ಕಾರಣಗಳಿಗೆ ಮದುವೆ ಮುರಿದು ಬೀಳೋದನ್ನ ನಾವು ನೋಡಿದ್ದೇವೆ, ಆದ್ರೆ ಇಲ್ಲೊಂದು ವಿಚಿತ್ರ ಘಟನೆಗೆ ಮದುವೆ ಮುರಿದು ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು ಹುಡುಗನ ಮೂಗು ದಪ್ಪಗಿದೆ ಎಂದು ಕೆಲವು ದಿನಗಳಲ್ಲಿ ನಡೆಯ ಬೇಕಿದ್ದ ಮದುವೆ ಮುರಿದು ಬಿದ್ದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ಜ್ಯೋತಿ ಪ್ರಕಾಶ್‌ ಮತ್ತು ಹಿಮಬಿಂದು ಎಂಬ ಜೋಡಿಗೆ ಮದುವೆ ನಿಶ್ಚಯವಾಗಿತ್ತು, ಇನ್ನೆನೂ ಮದುವೆ ದಿನವೂ ಸಹ ಹತ್ತಿರ ಬಂದಿತ್ತು, ಈ ಹಿನ್ನೆಲೆಯಲ್ಲಿ ಯುವತಿ ವಿದೇಶ ಪ್ರಯಾಣಕ್ಕೆ ಹೋಗಿದ್ದಳು ಅಲ್ಲಿಂದ ಬಂದ ಬಳಿಕ ಹಿಮಬಿಂದುಗೆ ಜ್ಯೋತಿ ಪ್ರಕಾಶ್‌ ಎಷ್ಟೇ ಕರೆ ಮಾಡಿದ್ರು ಕರೆಯನ್ನು ಸ್ವೀಕರಿಸಿರಲಿಲ್ಲ,ಅದಕ್ಕಾಗಿ ಆಕೆ ಸಹೋದರಿಗೆ ಕರೆಮಾಡಿ ವಿಚಾರಿಸಿದಾಗ , ಹಿಮಬಿಂದು ಹುಡುಗನ ಮೂಗು ದಪ್ಪಗಿದ್ದು ನಿನ್ನನ್ನು ಮದುವೆಯಾದರೆ ನನ್ನ ಸ್ನೇಹಿತರ ಮುಂದೆ ಅವಮಾನ ಆಗುತ್ತೆ ಅಂತ ಹೇಳಿದ್ದಾಳೆ.
ಇನ್ನು ಇವರಿಬ್ಬರು ಮ್ಯಾಟ್ರಿಮೋನಿಯಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ರು, ಈ ವಿಷಯ ತಿಳಿದ ಜ್ಯೋತಿ ಪ್ರಕಾಶ್‌ ಸುಮ್ಮನಾಗದೆ ಹಿಮಬಿಂದುವಿನಿಂದ ನನಗೆ ಅವಮಾನ ಆಗಿದೆ,ಅಲ್ಲದೇ ನಾನು ನಿಶ್ಚಿತಾರ್ಥಕ್ಕಾಗಿ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದೇನೆ.ಯುವತಿ ಹಾಗೂ ಅವರ ಮನೆಯವರು ನನಗೆ ಮೋಸ ಮಾಡಿದ್ದಾರೆ ಎಂದು ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ಹಿಮಬಿಂದು ಮತ್ತು ಪೋಷಕರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top