ನಾಳೆ ಸರ್ಕಾರಿ ಕಚೇರಿ ಮತ್ತು ಬಸ್ ಬಂದ್ ಆಗಲ್ಲ – ಆರ್ ಅಶೋಕ್

ನಾಳೆ ರೈತ ಸಂಘಟನೆಗೆ ರಾಜ್ಯ ಬಂದ್‍ಗೆ ಕರೆ ನೀಡಿದ್ದು, ಇದಕ್ಕೆ ವಿವಿಧ ಸಂಘಟನೆಗಳು ಸಹ ಬೆಂಬಲವನ್ನು ಸೂಚಿಸಿವೆ.ಇನ್ನು ಬೆಂಗಳೂರಿಗೆ ಸಂಪರ್ಕ ಕಲ್ಪಿಸಿವ ಹೆದ್ದಾರಿಗಳನ್ನು ಬಂದ್‍ಮಾಡಲುನಿರ್ಧರಿಸಲಾಗಿದೆ. ಇನ್ನು ನಾಳೆ ಕರ್ನಾಟಕ ಬಂದ್ ಇದ್ದುಬಸ್ ಸಂಚಾರ ಮತ್ತು ಸರ್ಕಾರಿ ಸೇವೆಗಳು ಇರಲಿದೆಯೇ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಉಂಟಾಗಿದೆ. ಈ ವಿಚಾರವಾಗಿ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದು ಸರ್ಕಾರದ ವತಿಯಿಂದ ಯಾವುದೇ ಬಂದ್ ಇಲ್ಲ, ಇನ್ನು ಬಂದ್‍ಗೆ ಯಾವುದೇ ಅವಕಾಶವಿಲ್ಲ, ಸರ್ಕಾರಿ ಕಚೇರಿಗಳು,ಟ್ಯಾಕ್ಸಇ, ಬಸ್ ಸೇವೆಗಳು ಎಂದಿನಂತೆ ಇರುತ್ತದೆ, ಅಂಗಡಿ ಮುಂಗಟ್ಟುಗಳು ಸಹ ಓಪನ್ ಇರಲಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಇನ್ನು ಕಿಡಿಗೇಡಿಗಳು ಬಲವಂತವಾಗಿ ಬಂದ್ ಮಾಡಿಸುವುದು ಮತ್ತು ಕಲ್ಲು ತೂರಾಟ ನಡೆಸುವುದು ಮಾಡಿದ್ರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top