ನಾಳೆ ದರ್ಶನ್ ಕುರುಕ್ಷೇತ್ರ ಟ್ರೈಲರ್ ರಿಲೀಸ್..!

ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ಇನ್ಬು ಕೆಲವೇ ದಿನಗಳು ಬಾಕಿ‌ ಇದೆ, ಇನ್ನು ದರ್ಶನ್ ಅವರ 50ನೇ ಚಿತ್ರ ಮತ್ತು ಐದು ಭಾಷೆಗಳಲ್ಲಿ ತೆರೆ ಕಾಣ್ತಾ ಇರೋದು ಈ ಚಿತ್ರದ ಮತ್ತೊಂದು ಹೈಲೆಟ್ , ಆದ್ರೆ ಆದ್ಯಾಕೋ ದರ್ಶನ್ ಅಭಿಮಾನಿಗಳಿಗೆ ಕುರುಕ್ಷೇತ್ರ ಚಿತ್ರದ ನಿರ್ಮಾಪಕರ ಮೇಲೆ ಕೊಂಚ ಬೇಸರು ಇದ್ದಂತಿದೆ. ಅದಕ್ಕೆ ಕಾರಣವೂ ಇದೆ, ಕುರುಕ್ಷೇತ್ರ ಚಿತ್ರ ದರ್ಶನ್ ಅವರ 50ನೇ ಸಿನಿಮಾ ಆದ್ರೂ ಟ್ರೈಲರ್ ನಲ್ಲಿ ಹೆಚ್ಚು ಬಿಂಬಿಸಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿ ಇದೆ, ಆ ಬೇಸರವನ್ನು ಮರೆಸಲು ಈಗ ಚಿತ್ರ ತಂಡ ತಯಾರಿನಡೆಸಿದ ರೀತಿ ಇದೆ, ಹೌದು ಕುರುಕ್ಷೇತ್ರದ ಎರಡನೇ ಟ್ರೈಲರ್ ನಾಳೆ ರಿಲೀಸ್ ಆಗಲಿದೆ, ಈ ಬಗ್ಗೆ ದರ್ಶನ್ ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿದ್ದು..


ಅಭಿಮಾನಿಗಳ ಒತ್ತಾಯದ ಮೇರೆಗೆ ನಾಳೆ ಕುರುಕ್ಷೇತ್ರ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಲಿದೆ ನಾಳೆ ಮಧ್ಯಾಹ್ನ 2 ಗಂಟೆಗೆ ತಪ್ಪದೇ ವೀಕ್ಷಿಸಿ ನಿಮ್ಮ ದಾಸ ದರ್ಶನ್ ಅಂತ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಟ್ರೈಲರ್ ಯಾವ ರೀತಿ ಖುಷಿಕೊಡಲಿದೆ ಕಾದುನೋಡ ಬೇಕು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top