ನಾಲ್ಕನೇ ಟೆಸ್ಟ್ ಗೆ ಆಸ್ಟ್ರೇಲಿಯಾಗೆ ಹೋಗಲು ಸೆಹ್ವಾಗ್ ರೆಡಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಟೀಂ ಇಂಡಿಯಾ ಸದ್ಯ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸುವ ಮೂಲಕ ನಾಲ್ಕನೇ ಟೆಸ್ಟ್ ಮೇಲೆ ಕಣ್ಣಿಟ್ಟಿದೆ, ಆದ್ರೆ ಇದೀಗ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡುವ ಮೊದಲೇ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ರು, ಇದೀಗ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಹೋಗುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರು ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಗುಳಿಯುತ್ತಿದ್ದಾರೆ.

ಟೂರ್ನಿ ಆರಂಭಕ್ಕೂ ಮುನ್ನವೇ ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಗಾಯದ ಸಮಸ್ಯೆಯಿಂದ ತಂಡಕ್ಕೆ ಆಯ್ಕೆಯಾಗಿರಲಿಲ್ಲ, ಇನ್ನು ಆಸ್ಟ್ರೇಲಿಯಾ ಪ್ರವಾಸ ಹೊರಟ ಟೀಂ ಇಂಡಿಯಾಗೆ ಮೊದಲ ಟೆಸ್ಟ್‍ನಲ್ಲಿ ಮೊಹಮ್ಮದ್ ಶಮಿ ಬಲಗೈಗೆ ಗಾಯ ಮಾಡಿಕೊಂಡು ತಂಡದಿಂದ ಹೊರಗುಳಿದ್ರು, ನಂತರ ಎರಡನೇ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ಸ್ನಾಯು ಸೆಳೆತಕ್ಕೆ ಒಳಗಾಗಿ ಟೂರ್ನಿಯಿಂದ ಹೊರಗುಳಿದ್ರೆ, ಇತ್ತ ಕೆಎಲ್ ರಾಹುಲ್ ಅಭ್ಯಾಸ ನಡೆಸುವ ವೇಳೆ ಗಾಯಗೊಂಡು ಅವರು ಸಹ ಟೂರ್ನಿಯಿಂದ ಹೊರಗುಳಿದ್ರು,

ಇನ್ನು ಮೂರನೇ ಟೆಸ್ಟ್ ಪಂದ್ಯದ ವೇಳೆ ಜಡೇಜಾ ಬ್ಯಾಟಿಂಗ್ ಮಾಡುವ ವೇಳೆ ಹೆಬ್ಬೆಟ್ಟಿಗೆ ಗಾಯಮಾಡಿಕೊಂಡಿದ್ರೆ, ಇದೀಗ ಬೂಮ್ರಾ ಸಹ ಕಿಬ್ಬೊಟ್ಟೆಯ ನೋವಿನಿಂದ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಇನ್ನು ಇವರ ಜೊತೆಯಲ್ಲಿ ರಿಷಭ್ ಪಂತ್‍ಗೆ ಮೊಣಕೈಗೆ ಗಾಯವಾಗಿದ್ದು ಅವರು ಸಹ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿದೆ, ಇನ್ನು ಹನುವ ವಿಹಾರಿಗೆ ಕಾಲುನೋವು ಸಮಸ್ಯೆಯನ್ನು ಎದುರಿಸುತ್ತಿದ್ದು, ನಾಲ್ಕನೇ ಟೆಸ್ಟ್‍ಗೆ ಅಲಭ್ಯರಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಟೀಂ ಇಂಡಿಯಾದಲ್ಲಿ ಗಾಯದ ಸಮಸ್ಯೆ ಪ್ರಮುಖವಾಗಿದ್ದು, ಇದೀಗ ಗಾಯಾಳುಗಳನ್ನು ಸೇರಿ ಒಂದು ತಂಡ ಮಾಡಿದ್ರು ಒಂದು ಗಾಯಾಳು ಟೀಂ ಇಂಡಿಯಾ ರೆಡಿಯಾಗಲಿದೆ.

ಇದೀಗ ಇದಕ್ಕೆ ಪೂರಕ ಎಂಬಂತೆ ಟೀಂ ಇಂಡಿಯಾದ ಮಾಜಿ ಆಟಗಾರ ಡೆಲ್ಲಿ ಡ್ಯಾಷರ್ ವೀರೇಂದ್ರ ಸೆಹ್ವಾಗ್ ಬಿಸಿಸಿಐಗೆ ಟ್ವೀಟ್ ಮಾಡಿದ್ದು, ಅವಶ್ಯಕವಿದ್ದರೆ ಆಸ್ಟ್ರೇಲಿಯಾಗೆ ಹೋಗಲು ಸಿದ್ಧ ಅಂತ ಹೇಳಿದ್ದಾರೆ. ಬುಮ್ರಾ ಇಲ್ಲ..ವಿಹಾರಿ ಇಲ್ಲ..ರಾಹುಲ್ ಇಲ್ಲ..ಶಮಿ ಇಲ್ಲ.. ಹೀಗಾಗಿ ಟೀಂ ಇಂಡಿಯಾದಲ್ಲಿ 11 ಜನ ಭರ್ತಿ ಆಗದಿದ್ರೆ ನಾನು ಆಸ್ಟ್ರೇಲಿಯಾ ಹೋಗೋಕೆ ರೆಡಿ ಕ್ವಾರೆಂಟೈನ್ ಎಲ್ಲಾ ಆಮೇಲೆ ನೋಡೋಣ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಾನು ಆಡಲು ರೆಡಿ ಎಂದು ಬಿಸಿಸಿಐಗೆ ಟ್ವೀಟ್ ಮಾಡಿ ಹೇಳಿದ್ದಾರೆ.

ಒಟ್ಟಿನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಆಘಾತವಾಗಿದ್ರೆ, ಇತ್ತ ಗಾಯಾಳುಗಳನ್ನು ಸೇರಿಸಿಕೊಂಡೆ ಒಂದು ತಂಡವನ್ನು ಕಟ್ಟಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಶುರುಮಾಡಿದ್ದಾರೆ.

ನಿಮ್ಮ ಪ್ರಕಾರ ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಲು ಫೀಟ್‍ನೆಸ್ ಸಮಸ್ಯೆಯೇ ಕಾರಣ ಅಂತ ಅನಿಸುತ್ತದೆಯಾ, ವೀರೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದ್ರೆ ಮತ್ತೆ ರನ್ ಹೊಳೆ ಹರಿಸುತ್ತಾರೆ ಅಂತ ಅನಿಸುತ್ತದೆಯಾ ಕಾಮೆಂಟ್ ಮಾಡಿತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top